ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮಗು ಸೇರಿ ಐವರು ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬಸ್ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಜೊತೆಗೆ ಕೆಲವರು ಗಾಯಗೊಂಡಿದ್ದಾರೆ.
ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ (45) , ರಾಯಚೂರಿನ ಮಸ್ಕಿ ಮೂಲದ ರಮೇಶ್ (40), ರಾಯಚೂರು ಜಿಲ್ಲೆಯ ಆಲಾಪುರ ಮೂಲದ ರವಿ (23), ರಾಯಚೂರು ಮೂಲದ ಮಾಬಮ್ಮ (35) ಹಾಗೂ ಮಾನವಿ ಮೂಲದ ಮಗು ನರಸಪ್ಪ (5) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ, ಮಾಬಮ್ಮ (35) ಚಿಕಿತ್ಸೆಗೆ ಸ್ಪಂದಿಸದೇ ಜಿಲ್ಲಾಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಬಸ್ನಲ್ಲಿದ್ದ 6 ಜನರಿಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬಸ್ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಎಡಗಡೆಯ ಸೀಟಿನಲ್ಲಿ ಮುಂದೆ ಕುಳಿತಿರುವ ನಾಲ್ವರು ಮೃತಪಟ್ಟಿದ್ದಾರೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಐಮಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಮೃತರಲ್ಲಿ ರಾಯಚೂರು ಮೂಲದವರು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತ ರವಿ (23) ಎಂಬುವರು ಮಸ್ಕಿಗೆ ಹೆಣ್ಣು ನೋಡಲು ಹೋಗಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದರು. ಹಾಗೆಯೇ ಕಡೋಣಿ ಇಂದ ಬೆಂಗಳೂರಿಗೆ ಗಾರೆ ಕೆಲಸಕ್ಕೆ ತೆರಳುತ್ತಿದ್ದ ಶ್ರೀದೇವಿ ಎಂಬುವರ ಮಗು ನರಸಪ್ಪ (5) ಕೂಡ ಅಪಘಾತದಲ್ಲಿ ಸಾವನ್ನಪ್ಪಿದೆ. ಗಾಯಾಳುಗಳನ್ನು ಚಳ್ಳಕೆರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
'ಅತಿ ವೇಗವಾಗಿ ಬಸ್ ಚಾಲಕ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿದೆ. ಚಾಲಕ ವಾಹನ ಚಾಲನಾ ಪರವಾನಗಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ' ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
-
Can you guess the bus ?
— alok kumar (@alokkumar6994) September 11, 2023 " class="align-text-top noRightClick twitterSection" data="
Today at 3 am an Over speeding KSRTC bus tried to wrongly overtake a lorry in Chitradurga District, resulting in death of 5 persons
A Man made disaster
DL of the driver being impounded
“Plz put indicator & maintain safe distance while overtaking “ pic.twitter.com/oDYauGj061
">Can you guess the bus ?
— alok kumar (@alokkumar6994) September 11, 2023
Today at 3 am an Over speeding KSRTC bus tried to wrongly overtake a lorry in Chitradurga District, resulting in death of 5 persons
A Man made disaster
DL of the driver being impounded
“Plz put indicator & maintain safe distance while overtaking “ pic.twitter.com/oDYauGj061Can you guess the bus ?
— alok kumar (@alokkumar6994) September 11, 2023
Today at 3 am an Over speeding KSRTC bus tried to wrongly overtake a lorry in Chitradurga District, resulting in death of 5 persons
A Man made disaster
DL of the driver being impounded
“Plz put indicator & maintain safe distance while overtaking “ pic.twitter.com/oDYauGj061
ಇದನ್ನೂ ಓದಿ: ಸರಣಿ ಅಪಘಾತ.. ಸಂಪೂರ್ಣ ನಜ್ಜುಗುಜ್ಜಾದ ಕಾರು.. ಅದೃಷ್ಟವಶಾತ್ ಪಾರಾದ ಚಾಲಕ: CCTV Video
ಧರ್ಮಸ್ಥಳದಲ್ಲಿ ದರ್ಶನ ಪಡೆದು ವಾಪಸ್ ತೆರಳುವಾಗ ಅಪಘಾತ: ಧರ್ಮಸ್ಥಳದಲ್ಲಿ ದರ್ಶನ ಪಡೆದು ವಾಪಸ್ ತೆರಳುವಾಗ ಅಪಘಾತ ಸಂಭವಿಸಿ ತಮಿಳುನಾಡಿನ ಏಳು ಮಹಿಳೆಯರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ನಟ್ರಂಪಳ್ಳಿ ಸಮೀಪದ ಚಂಡಿಯೂರಿಯ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅರ್ಧ ಗಂಟೆ ಪ್ರಯಾಣಿಸಿದ್ರೆ ಊರು ಸೇರುತ್ತಿದ್ದ ಯಾತ್ರಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಯಾತ್ರಿಕರ ವ್ಯಾನ್ ಪಂಕ್ಚರ್ ಆಗಿದ್ದರಿಂದ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ. ಈ ವೇಳೆ ಮಹಿಳೆಯರು ವಾಹನದಿಂದ ಇಳಿದು ಕೆಳಗೆ ನಿಂತಿದ್ದರು. ಆಗ ವೇಗವಾಗಿ ಬಂದ ಮಿನಿ ಲಾರಿ ವ್ಯಾನ್ಗೆ ಡಿಕ್ಕಿ ಹೊಡೆದು, ಮಹಿಳೆಯರ ಮೇಲೆ ಪಲ್ಟಿಯಾದ ಪರಿಣಾಮ ದುರಂತ ಸಂಭವಿಸಿದೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತ; ತಮಿಳುನಾಡಿನ 7 ಮಹಿಳೆಯರು ಸಾವು