ETV Bharat / state

ಚಿತ್ರದುರ್ಗದಲ್ಲಿ ಇಂದು ಕೊರೊನಾದಿಂದ ನಾಲ್ವರು ಗುಣಮುಖ - chitradurga news

ಚಿತ್ರದುರ್ಗ ಜಿಲ್ಲೆಯಲ್ಲಿಂದು ಓರ್ವ ಕೆಎಸ್ಆರ್​ಪಿ ಪೊಲೀಸ್ ಕಾನ್ಸ್​ಟೇಬಲ್ ಸೇರಿ ಒಟ್ಟು ನಾಲ್ವರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

four corona patient discharge
ಚಿತ್ರದುರ್ಗದಲ್ಲಿ ಕೊರೊನಾದಿಂದ ನಾಲ್ವರು ಗುಣಮುಖ
author img

By

Published : Jun 9, 2020, 11:45 PM IST

ಚಿತ್ರದುರ್ಗ : ಜಿಲ್ಲೆಯಲ್ಲಿ ನಾಲ್ವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ನಾಲ್ವರಿಗೂ ಹೂಗುಚ್ಛ ನೀಡುವ ಮೂಲಕ ಎಸ್​ಪಿ ಜಿ. ರಾಧಿಕಾ ಅವರು, 14 ದಿನಗಳ ಹೋಮ್​ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿ ಬಿಡುಗಡೆ ಮಾಡಿದರು.

ಚೆನ್ನೈನಿಂದ ಉತ್ತರಪ್ರದೇಶಕ್ಕೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗಕ್ಕೆ ಆಗಮಿಸಿ ಪೊಲೀಸರ ಕೈಗೆ ಸಿಕ್ಕಿದ್ದ ಮೂವರು ಕಾರ್ಮಿಕರು ಸೇರಿದಂತೆ ಬೆಂಗಳೂರಿನಿಂದ ಚಿತ್ರದುರ್ಗ ತಾಲೂಕಿನ ಸೊಂಡರಕೊಳ ಗ್ರಾಮಕ್ಕೆ ಆಗಮಿಸಿದ್ದ ಓರ್ವ ಕೆಎಸ್ಆರ್​ಪಿ ಪೊಲೀಸ್ ಕಾನ್ಸ್​ಟೇಬಲ್ ಸೇರಿ ಒಟ್ಟು ನಾಲ್ವರು ಕೊರೊನಾದಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 40 ಪ್ರಕರಣಗಳಲ್ಲಿ 27 ಜನ ಗುಣಮುಖರಾಗಿದ್ದು, ಓರ್ವ ಬಾಲಕಿ ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಜಿಲ್ಲೆಯಲ್ಲಿ ಒಟ್ಟು 12 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.