ETV Bharat / state

ಈರುಳ್ಳಿ ನಷ್ಟದಿಂದ ಕಂಗೆಟ್ಟಿದ್ದ ದುರ್ಗದ ರೈತರ ಬದುಕು ಅರಳಿಸುತ್ತಿದೆ ಹೂವಿನ ಬೆಳೆ

'ಇತ್ತೀಚೆಗೆ ಚಿತ್ರದುರ್ಗ ತಾಲೂಕಿನ ಹಲವೆಡೆ ಹೂವಿನ ಮಾರುಕಟ್ಟೆ ಆರಂಭಿಸಲಾಗಿದ್ದು, ತಕ್ಕ ಮಟ್ಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಆದರೆ, ಇತಂಹ ಸಂದರ್ಭದಲ್ಲಿ ಹೂವಿನ ಬೆಳೆಗೆ ನುಸಿ ರೋಗ‌ ಕಾಡುತ್ತಿದ್ದು, ರೋಗದಿಂದ ಪಾರು‌ ಮಾಡಲು ರೈತರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಾಗಿಯೂ ಇಲ್ಲಿನ ರೈತರು ಎಕರೆಗೆ 50 ರಿಂದ 60 ಸಾವಿರ ರೂ. ಲಾಭ ಪಡೆಯುವ ತವಕದಲ್ಲಿದ್ದಾರೆ.'

Flower cultivation in Chitradurga district
ರೈತರ ಬದುಕು ಅರಳಿಸಿದ ಹೂವುಗಳು
author img

By

Published : Oct 7, 2020, 7:25 PM IST

ಚಿತ್ರದುರ್ಗ: ಲಾಕ್​ಡೌನ್​ ವೇಳೆಯಲ್ಲಿ ಮಾರುಕಟ್ಟೆ ಸಿಗದೇ ಬೀದಿಗೆ ಬಂದಿದ್ದ ಜಿಲ್ಲೆಯ ಹೂವು ಬೆಳೆಗಾರರು ಇದೀಗ ತರಹೆವಾರಿ ಹೂವುಗಳನ್ನು ಬೆಳೆಯುವ ಮೂಲಕ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ಬೆಳೆದು ಕೈ ಸುಟ್ಟಿಕೊಂಡಿದ್ದ ಜಿಲ್ಲೆಯ ನೂರಾರು ರೈತರು, ಇದೀಗ ಅತ್ಯಧಿಕ ಲಾಭ ತಂದುಕೊಡಬಲ್ಲ ವಿವಿಧ ತಳಿಯ ಹೂವುಗಳ ಕೃಷಿಯತ್ತ ಮುಖ ಮಾಡುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

Flower cultivation in Chitradurga district
ರೈತರ ಬದುಕು ಅರಳಿಸಿದ ಹೂವುಗಳು

ನಾಡ ಹಬ್ಬ ದಸರಾ ಆಗಮಿಸುತ್ತಿದ್ದು ಹತ್ತು ಹಲವು ಮಾದರಿಯ ಹೂವು ಬೆಳೆದ ರೈತ ಕಟಾವು ಮಾಡಲು ತುದಿಗಾಲಲ್ಲಿ ನಿಂತಿದ್ದಾನೆ. ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ, ಮದಕರಿಪುರ, ದೊಡ್ಡಸಿದ್ದವ್ವನ ಹಳ್ಳಿ ಸೇರಿದಂತೆ ಇತರೆಡೆ ಹೂವು ಬೆಳೆಯಲಾಗುತ್ತಿದೆ. ಇಲ್ಲಿ ಕನಕಾಂಬರ, ಮಲ್ಲೆ, ದುಂಡು, ಸೇವಂತಿಗೆ, ಚೆಂಡು ಹೂವು ಮುಂತಾದ ತರಹೆವಾರಿ ಹೂವುಗಳನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ಬೆಳೆದ ಹೂವು ನೆರೆಯ ಆಂಧ್ರ, ಗೋವಾ ಸೇರಿದಂತೆ ಬೆಳಗಾವಿಗೆ ರಫ್ತು ಆಗುತ್ತವೆ.

ಇತ್ತೀಚೆಗೆ ಚಿತ್ರದುರ್ಗ ತಾಲೂಕಿನ ಹಲವೆಡೆ ಹೂವಿನ ಮಾರುಕಟ್ಟೆ ಆರಂಭಿಸಲಾಗಿದ್ದು, ತಕ್ಕ ಮಟ್ಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಆದರೆ, ಇತಂಹ ಸಂದರ್ಭದಲ್ಲಿ ಹೂವಿನ ಬೆಳೆಗೆ ನುಸಿ ರೋಗ‌ ಕಾಡುತ್ತಿದ್ದು, ರೋಗದಿಂದ ಪಾರು‌ ಮಾಡಲು ರೈತರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಾಗಿಯೂ ಇಲ್ಲಿನ ರೈತರು ಎಕರೆಗೆ 50 ರಿಂದ 60 ಸಾವಿರ ರೂ. ಲಾಭ ಪಡೆಯುವ ತವಕದಲ್ಲಿದ್ದಾರೆ ಎನ್ನುತ್ತಾರೆ ಹೂವು ಬೆಳೆಗಾರ ಮಾಲತೇಶ್.

ಮಳೆ‌ ಇಲ್ಲದೇ ಹೈರಾಣಾಗಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ವರುಣ ಕೃಪೆ ತೋರಿದ್ದಾನೆ. ಇದರಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ಈರುಳ್ಳಿಗೆ ಸುಳಿ ರೋಗ‌ ವಕ್ಕರಿಸಿದ್ದರಿಂದ ಈರುಳ್ಳಿ ಬೆಳೆಗಾರರು ಇದೀಗ ಹೂವು ಕೃಷಿಯತ್ತ ಒಲಿದ್ದಾರೆ. ಶಕ್ತಿ ಇದ್ದಷ್ಟು ಸೇವಂತಿ, ಕುಪ್ಪಂ, ದುಂಡು, ಮಲ್ಲೆ, ಕನಕಾಂಬರ ಹೂವುವನ್ನು ಬೆಳೆಯಲಾಗುತ್ತಿದ್ದು, ಬೆಳೆ ಕಟಾವು ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ದಸರಾ ಇದ್ದುದರಿಂದ ಸೇವಂತಿ, ಚೆಂಡು ಹಾಗೂ ಕುಪ್ಪಂ ಹೂವು 1000 ರೂ.ಗೆ 25 ಮಾರು ಎಂದು ಬೆಲೆ ನಿಗದಿ ಮಾಡಲಾಗಿದೆ. ಇನ್ನು ದುಂಡು, ಮಲ್ಲೆ ಹಾಗೂ ಕನಕಾಂಬರ ಹೂವು ಕೆ.ಜಿ ಗೆ 600 ರಿಂದ 800 ರೂ. ವರೆಗೆ ಬೆಲೆ‌ ನಿಗದಿಪಡಿಸಲಾಗಿದೆ. ಅಂದುಕೊಂಡಂತೆ ರೈತರು ಲಾಭ ಗಳಿಸುವ ತವಕದಲ್ಲಿದ್ದಾರೆ ಎನ್ನುತ್ತಾರೆ ರೈತ ಮುಖಂಡ ಕಾಂತರಾಜ್.

ರೈತರ ಬದುಕು ಅರಳಿಸಿದ ಹೂವುಗಳು

ಒಟ್ಟಾರೆ ಲಾಕ್​ಡನ್​ ಹೇರಿಕೆಯಿಂದ ಹೈರಾಣಾಗಿದ್ದ ಹೂವು ಬೆಳೆಗಾರರು ದಸರಾ ಹಬ್ಬದ ಪ್ರಯುಕ್ತ ತಕ್ಕ ಮಟ್ಟಿಗೆ ಲಾಭ ಪಡೆಯಲು ಮುಂದಾಗಿದ್ದಾರೆ. ಈರುಳ್ಳಿ ಬೆಳೆ ಕೈಕೊಟ್ಟ ಪರಿಣಾಮ ಹೂವು ಬೆಳೆಯಲು ರೈತರು ಮುಂದಾಗಿರುವುದು ಸಂತಸದ ವಿಚಾರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.