ETV Bharat / state

ಈಟಿವಿ ಭಾರತ ಫಲಶೃತಿ: ಮಹಿಳೆಯನ್ನು ಮ್ಯಾನ್​ಹೋಲ್​ಗೆ ಇಳಿಸಿದ ಗುತ್ತಿಗೆದಾರನ ವಿರುದ್ಧ ಎಫ್ಐಆರ್​

ಮಹಿಳೆಯನ್ನು ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಅಶೋಕ್ ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈಟಿವಿ ಭಾರತ ಫಲಶೃತಿ
author img

By

Published : Sep 9, 2019, 2:56 PM IST

ಚಿತ್ರದುರ್ಗ: ಬರೀ ಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಮಹಿಳೆವೋರ್ವಳನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಅಶೋಕ್ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಳೆದ ಶನಿವಾರ ನಡೆದಿದ್ದ ಈ ಅಮಾನವೀಯ ಘಟನೆ ಬಗ್ಗೆ 'ಈಟಿವಿ ಭಾರತ'ನಲ್ಲಿ ಘಟನೆ ವರದಿ ಪ್ರಕಟಿಸಲಾಗಿತ್ತು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಖುದ್ದು ಚಿತ್ರದುರ್ಗ ಟೌನ್ ಪೊಲೀಸ್​ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಇದು ಈಟಿವಿ ಭಾರತ ವರದಿಯ ಫಲಶೃತಿಯಾಗಿದೆ.

FIR Against the contractor who reduced woman to manhole
ಗುತ್ತಿಗೆದಾರನ ವಿರುದ್ಧ ಎಫ್ಐಆರ್​

ಹಿನ್ನೆಲೆ:

ಗುತ್ತಿಗೆದಾರ ಅಶೋಕ್ ಈ ಮಹಿಳೆಗೆ ಯಾವುದೇ ರೀತಿಯ ರಕ್ಷಣಾ ಕವಚ ನೀಡದೆ ಮ್ಯಾನ್​ಹೋಲ್​ಗೆ ಇಳಿಸಿದ್ದರು. ನಗರದ ಜೈನ್ ದೇವಾಲಯ ಮುಂಭಾಗದ ರಸ್ತೆಯಲ್ಲಿ, ಮಹಿಳೆಯನ್ನ ಮ್ಯಾನ್ ಹೋಲ್​ಗೆ ಇಳಿಸಿ ಸ್ವಚ್ಛಗೊಳಿಸುವಂತೆ ಕಾಂಟ್ರಾಕ್ಟರ್ ಹೇಳಿರುವುದನ್ನು ಸಾರ್ವಜನಿಕರು ಖಂಡಿಸಿದ್ದರು.

ರಕ್ಷಣಾ ಕವಚವಿಲ್ಲದೆ ಮಹಿಳೆಯನ್ನು ಮ್ಯಾನ್​ಹೋಲ್​ಗೆ ಇಳಿಸಿದ್ರು: ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ

ಈ ಅಮಾನವೀಯ ಘಟನೆ ಕುರಿತು ವರದಿ ಪ್ರಕಟಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದಾರೆ. ವರದಿಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸಿದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.

Intro:ಮ್ಯಾನ್ ಹೋಲ್ ಪ್ರಕರಣ : ಕಟ್ರ್ಯಾಕ್ಟರ್ ವಿರುದ್ಧ ಎಫ್ಐಆರ್ ದಾಖಲು

ಈಟಿವಿ ಇಂಪ್ಯಾಕ್ಟ್....

ಆ್ಯಂಕರ್:- ವೃದ್ದೆಯೊಬ್ಬರನ್ನು ಸ್ವಚ್ಛಗೊಳಿಸಲು ಮ್ಯಾನ್ ಹೋಲ್ ಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟ್ರ್ಯಾಕ್ಟರ್ ಆಶೋಕ್ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ಶನಿವಾರ ನಡೆದಿದ್ದ ಘಟನೆ ಇದಾಗಿದ್ದು, ಪ್ರಕರಣದ ಬಗ್ಗೆ ಈಟಿವಿ ಭಾರತ ವರದಿ ಬಿತ್ತರಿಸಿತ್ತು. ಪ್ರಕರಣ ನಗರ ಸಭೆ ಪೌರಯುಕ್ತ ಚಂದ್ರಪ್ಪ ನವರ ಗಮನಕ್ಕೆ ಬಂದ ಬಳಿಕ ಚಂದ್ರಪ್ಪನವರೇ ಚಿತ್ರದುರ್ಗ ಟೌನ್ ಠಾಣೆ ಆಗಮಿಸಿ ಪ್ರಕರಣ ದಾಖಲಿಸಿದ್ದು, ವರದಿ ಈಟಿವಿ ಭಾರತ ಫಲಶೃತಿಯಾಗಿದೆ. ಚಿತ್ರದುರ್ಗ ನಗರದ ಜೈನ್ ದೇವಾಲಯ ಮುಂಭಾಗದ ರಸ್ತೆಯಲ್ಲಿ ಘಟನೆ ನಡೆದಿತ್ತು, ವೃದ್ದೆ ಮಹಿಳೆಯನ್ನ ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಚಗೊಳಿಸುವಂತೆ ಕಂಟ್ರಾಕ್ಟರ್ ಆಶೋಕ್ ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ವೃದ್ದೆ ಮಹಿಳೆಗೆ ಯಾವುದೇ ರಕ್ಷಣಾ ಕವಚ ನೀಡದೆ ಮ್ಯಾನ್ ಹೋಲ್ ಗೆ ಇಳಿಸಿದ ಕಂಟ್ರಾಕ್ಟರ್ ವಿರುದ್ಧ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದು, ಹಣದ ಆಸೆ ತೋರಿಸಿ ವೃದ್ದೆಯನ್ನ ಮ್ಯಾನ್ ಹೋಲ್ ಗೆ ಇಳಿಸಿರುವ ಮತ್ತೊಂದು ಆರೋಪವನ್ನು ಸ್ಥಳೀಯರು ಮಾಡುತ್ತಿದ್ದರು ಕೂಡ ಚಿತ್ರದುರ್ಗ ನಗರಸಭೆ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಈಟಿವಿ ಭಾರತ ವರದಿ ಗಮನಿಸಿದ‌ ಪೌರಯುಕ್ತರು ಚಿತ್ರದುರ್ಗದ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫ್ಲೋ....Body:FirConclusion:Manhole
ETV Bharat Logo

Copyright © 2024 Ushodaya Enterprises Pvt. Ltd., All Rights Reserved.