ETV Bharat / state

ಕೋಟೆನಾಡು ತಲುಪಿದ ಎಸ್​ಟಿ ಮೀಸಲಾತಿ ಹೋರಾಟ ಪಾದಯಾತ್ರೆ

ಕಾಗಿನೇಲೆ ಗುರು ಪೀಠದಿಂದ ಜ.15 ರಂದು ಆರಂಭವಾಗಿರುವ ಕುರುಬ ಸಮುದಾಯ ಮೀಸಲಾತಿ ಹೋರಾಟ ಪಾದಯಾತ್ರೆ ಚಿತ್ರದುರ್ಗ ಭರಮಸಾಗರಕ್ಕೆ ಬಂದು ತಲುಪಿದೆ.

kuruba community
kuruba community
author img

By

Published : Jan 23, 2021, 1:24 AM IST

ಚಿತ್ರದುರ್ಗ: ಎಸ್​ಟಿ ಮೀಸಲಾತಿ ಒತ್ತಾಯಿಸಿ ಕಾಗಿನೇಲೆ ಗುರು ಪೀಠದ ನಿರಂಜನಾ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಕೋಟೆನಾಡು ಚಿತ್ರದುರ್ಗ ತಲುಪಿದೆ.

ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮಕ್ಕೆ ಎಸ್​ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಮಾಡಲಾಗುತ್ತಿದೆ. ಕಾಗಿನೇಲೆ ಗುರು ಪೀಠದಿಂದ ಜ.15 ರಂದು ಆರಂಭವಾಗಿರುವ ಕುರುಬ ಸಮುದಾಯ ಮೀಸಲಾತಿ ಹೋರಾಟ ಪಾದಯಾತ್ರೆ ಚಿತ್ರದುರ್ಗ ಭರಮಸಾಗರಕ್ಕೆ ಬಂದು ತಲುಪಿದ್ದು, ಮಾರಘಟ್ಟ ಗ್ರಾಮಕ್ಕೆ ತಲುಪಿ ವಾಸ್ತವ್ಯ ಹೂಡಲಾಗಿದೆ.

ಎಸ್​ಟಿ ಮೀಸಲಾತಿ ಹೋರಾಟ ಪಾದಯಾತ್ರೆ

ಪಾದಯಾತ್ರೆಯಲ್ಲಿ ಕುರುಬ ಸಮುದಾಯ 10ಕ್ಕೂ ಅಧಿಕ ಮಠಾಧೀಶರು ಹಾಗೂ ನೂರಾರು ಜನರು ಭಾಗಿಯಾಗಿದ್ದಾರೆ. ಬೆಳಗಿನ ಜಾವ (ಜ.23) ಪಾದಯಾತ್ರೆ ಚಿತ್ರದುರ್ಗ ನಗರಕ್ಕೆ ಆಗಮಿಸಿ ನಗರ ತಿರುಮಲ ಕಲ್ಯಾಣ ಮಂಟಪದಲ್ಲಿ ವಿಶ್ರಾಂತಿ ಪಡೆದು, ಮಧ್ಯಾಹ್ನದ ಸಮಯದಲ್ಲಿ ಕೋಟೆನಾಡಿನಲ್ಲಿ ಬೃಹತ್ ಪಾದಯಾತ್ರೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಓದಿ: ಪಾದಯಾತ್ರೆ ಕಲ್ಯಾಣ ಕರ್ನಾಟಕದ ಗಡಿ ದಾಟುವ ಮುನ್ನ ಮೀಸಲಾತಿ ನಿರ್ಧಾರ ಕೈಗೊಳ್ಳಿ: ಕೂಡಲಸಂಗಮ ಶ್ರೀ

ಮೆರವಣಿಗೆಯಲ್ಲಿ ಸಾವಿರಾರೂ ಜನ ಸೇರಲಿದ್ದಾರೆ ಎಂದು ಕುರುಬ ಸಮುದಾಯದ ಮುಖಂಡರು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ ಪಾದಯಾತ್ರೆ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗಿಯಾಗಲಿದ್ದು, ಮೆರವಣಿಗೆ ಮೆರಗು ನೀಡಲಿವೆ. ಬಳಿಕ ಜ. 27ವರಿಗೂ ಜಿಲ್ಲೆ ಐಮಂಗಲ ,ಹಿರಿಯೂರು ಸೇರಿದಂತೆ ಜಿಲ್ಲೆ ವಿವಿಧ ಗ್ರಾಮಗಳ ಮೂಲಕ ಪಾದಯಾತ್ರೆ ನಡೆಸಲಿದೆ. ಇದಕ್ಕಾಗಿ ಸಮುದಾಯದ ಮುಖಂಡರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.