ಚಿತ್ರದುರ್ಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕೃಷಿ ಹೊಂಡದ ಮೃತ್ಯುಕೂಪವಾಗಿ ಮಾರ್ಪಡುತ್ತಿದೆ. ಹೊಲಗಳಲ್ಲಿ ನಿರ್ಮಾಣ ಮಾಡುವ ಹೊಂಡಗಳಲ್ಲಿ ಅದೆಷ್ಟೋ ರೈತರು ಹಾಗೂ ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದುಹೋಗಿವೆ. ಇದಕ್ಕೆ ಸಾಕ್ಷಿಯಂಬಂತಿದೆ ಜಿಲ್ಲೆಯಲ್ಲಿ ನಡೆದಿರುವ ದುರ್ಘಟನೆಯೊಂದು.
ಹೌದು, ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಪಳಿಕೆಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಎಸ್.ಟಿ ಉಮ್ಮಣ್ಣ(೫೫) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಸಂಬಂಧ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.