ETV Bharat / state

ಚಿತ್ರದುರ್ಗ : ಜನರಿಗೆ ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದ ನಕಲಿ ಪೊಲೀಸ್​​​ ಬಂಧನ - ನಕಲಿ ಪೊಲೀಸ್​​​ ಬಂಧನ

ಆರೋಪಿಯು ಹುಡುಗ-ಹುಡುಗಿಯರು ಓಡಾಟವನ್ನು ಗಮನಿಸಿ ಅಂತವರನ್ನು ಟಾರ್ಗೆಟ್ ಮಾಡುತ್ತಿದ್ದ. ಪಾರ್ಕ್, ಬೆಟ್ಟಗುಡ್ಡ, ದೇವಸ್ಥಾನಗಳು, ಜನ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಈ ಕೃತ್ಯಗಳನ್ನು ಎಸಗುತ್ತಿದ್ದ ಎನ್ನಲಾಗಿದೆ..

ನಕಲಿ ಪೊಲೀಸ್​​​ ಬಂಧನ
ನಕಲಿ ಪೊಲೀಸ್​​​ ಬಂಧನ
author img

By

Published : Dec 15, 2021, 4:21 PM IST

ಚಿತ್ರದುರ್ಗ : ಪೊಲೀಸ್ ಎಂದು ಹೇಳಿಕೊಂಡು ಜನರಿಗೆ ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದ ವ್ಯಕ್ತಿಯನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಈತನ ವಿರುದ್ಧ ಜಿಲ್ಲೆಯ ಚಿಕ್ಕಜಾಜೂರು, ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಎಂಟು ಪ್ರಕರಣ ದಾಖಲಾಗಿವೆ.

ಭದ್ರಾವತಿ ತಾಲೂಕಿನ ಕೂಡ್ಲಗೆರೆ ಗ್ರಾಮದ ವಾಸಿ ರಾಜಶೇಖರಪ್ಪ(40) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಂಗಾರದ ಆಭರಣ ಹಾಗೂ ಮೋಟರ್ ಬೈಕ್, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಹುಡುಗ-ಹುಡುಗಿಯರು ಓಡಾಟವನ್ನು ಗಮನಿಸಿ ಅಂತವರನ್ನು ಟಾರ್ಗೆಟ್ ಮಾಡುತ್ತಿದ್ದ. ಪಾರ್ಕ್, ಬೆಟ್ಟಗುಡ್ಡ, ದೇವಸ್ಥಾನಗಳು, ಜನ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಈ ಕೃತ್ಯಗಳನ್ನು ಎಸಗುತ್ತಿದ್ದ ಎನ್ನಲಾಗಿದೆ.

ಪೊಲೀಸ್ ಸ್ಟೈಲ್​​ನಲ್ಲಿ ಹೇರ್​​ ಕಟಿಂಗ್ ಮಾಡಿಸಿಕೊಂಡು ಖಾಕಿ ಪ್ಯಾಂಟ್, ಬ್ಲಾಕ್ ಜರ್ಕಿನ್ ಧರಿಸಿ ಪೊಲೀಸ್ ಎಂದು ಕೃತ್ಯಗಳನ್ನು ಮಾಡುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ತಿಳಿಸಿದ್ದಾರೆ. ಹೊಳಲ್ಕೆರೆ ಸಿಪಿಐ ರವೀಶ್, ಪಿಎಸ್​​ಐ ವಿಶ್ವನಾಥ್ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Bus fell in river: ಸೇತುವೆಯಿಂದ ನದಿಗೆ ಉರುಳಿದ ಆರ್​​ಟಿಸಿ ಬಸ್ : 9 ಮಂದಿ ಜಲಸಮಾಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.