ETV Bharat / state

Job Alert: ಚಿತ್ರದುರ್ಗ- ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ನೇಮಕಾತಿ

author img

By

Published : Jun 30, 2023, 11:54 AM IST

Updated : Jun 30, 2023, 1:01 PM IST

ಚಿತ್ರದುರ್ಗದಲ್ಲಿ ನರ್ಸ್,​ ತಜ್ಞ ವೈದ್ಯರ ಹುದ್ದೆಗೆ ಅಧಿಸೂಚನೆ ಪ್ರಕಟಿಲಾಗಿದೆ. ಇದೇ ವೇಳೆ ಕೋಲಾರದಲ್ಲಿ ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ.

Nurse and specialist Vacancy in Chitradurga

ಚಿತ್ರದುರ್ಗದ ಜಿಲ್ಲಾ ಎನ್​ಸಿಡಿ ಕೋಶ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಿಂದ ವಿವಿಧ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಎನ್​ಪಿಪಿಸಿ ಮತ್ತು ಎನ್​ಸಿಎಚ್​ಸಿಇ ಕಾರ್ಯಕ್ರಮದ ಅಡಿ ದಾದಿಯರು ಮತ್ತು ತಜ್ಞ ವೈದ್ಯರ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 11 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ.

ಹುದ್ದೆ ವಿವರ: ಚಿತ್ರದುರ್ಗ ಸರ್ವೇಕ್ಷಣಾಧಿಕಾರಿಗಳ ಕಚೇರಿಯಿಂದ 2 ತಜ್ಞ ವೈದ್ಯರು, 8 ಮಂದಿ ದಾದಿಯರು ಮತ್ತು ಒಬ್ಬರು ಕನ್ಸ್​​ಲ್ಟಂಟ್​ ಪಿಜಿಷಿಯನ್​ ಹುದ್ದೆ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಹತೆ- ವಿದ್ಯಾಭ್ಯಾಸ-ವಯೋಮಿತಿ- ವೇತನ

  • ತಜ್ಞ ವೈದ್ಯರು: ಎಂಬಿಬಿಎಸ್​- ಗರಿಷ್ಟ 40- 110000 ರೂ ಮಾಸಿಕ
  • ನರ್ಸ್​: ಜಿಎನ್​ಎಂ- ಗರಿಷ್ಟ 40- 14000 ರೂ ಮಾಸಿಕ
  • ಕನ್ಸ್​​ಲ್ಟಂಟ್​ ಪಿಜಿಷಿಯನ್: ಎಂಬಿಬಿಎಸ್​, ಎಂಡಿ- ಗರಿಷ್ಟ 50 -110000 ರೂ ಮಾಸಿಕ

ಅನುಭವ:

  • ತಜ್ಞ ವೈದ್ಯ ವೃತ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಒಂದು ವರ್ಷದ ಕಾರ್ಯಾನುಭವ ಹೊಂದಿರಬೇಕು.
  • ಕನ್ಸ್​​ಲ್ಟಂಟ್​ ಪಿಜಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಮೂರು ವರ್ಷದ ಹುದ್ದೆ ಅನುಭವವನ್ನು ಹೊಂದಿರಬೇಕು.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಈ ಹುದ್ದೆಗಳಿಗೆ ಮೆರಿಟ್ ಮತ್ತು ಸಂದರ್ಶನದ​​ ಆಧಾರದ ಮೇಲೆ ಈ ಹುದ್ದೆ ಆಯ್ಕೆ ಮಾಡಲಾಗುವುದು. ಈ ಹುದ್ದೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಬಯೋಡಾಟಾ, ವಿದ್ಯಾರ್ಹತೆಯ ದೃಢೀಕೃತ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಜೂನ್​ 28ರಿಂದ ಜುಲೈ 17ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು

ಅಧಿಸೂಚನೆ
ಅಧಿಸೂಚನೆ

ಅರ್ಜಿ ಸಲ್ಲಿಕೆ ವಿಳಾಸ: ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಪ್ರಯೋಗ ಶಾಲಾ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ, ಚಿತ್ರದುರ್ಗ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9449843250ಗೆ ಕರೆ ಮಾಡಬಹುದಾಗಿದೆ.

ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಇನ್ನಿತರ ವಿವರ ತಿಳಿಯಲು ಚಿತ್ರದುರ್ಗ ಜಿಲ್ಲಾಡಳಿತದ ಈ ಅಧಿಕೃತ ಜಾಲತಾಣಕ್ಕೆ chitradurga.nic.in ಅಭ್ಯರ್ಥಿಗಳು ಭೇಟಿ ನೀಡಬಹುದಾಗಿದೆ.

ಕೋಲಾರದಲ್ಲಿ ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ ಹುದ್ದೆ

ಕೋಲಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿಯಿಂದ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಕೋಲಾರ ಜಿಲ್ಲೆಯ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು

ಹುದ್ದೆ ವಿವರ: ಮುಳಬಾಗಿಲು ಮತ್ತು ಶ್ರೀನಿವಾಸಪುರ ಚಿಕಿತ್ಸಾ ಘಟಕದಲ್ಲಿ ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ ಒಂದು ಹುದ್ದೆ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಈ ಹುದ್ದೆ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ನೇರ ಸಂದರ್ಶನವನ್ನು ಜುಲೈ 10ರಂದು ನಡೆಸಲಾಗುವುದು

ನೇರ ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಕೆಎನ್​ಟಿಬಿ ಸಾನಿಟೊರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ. ಈ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಬಯೋಡೆಟಾ, ಶೈಕ್ಷಣಿಕ ಮತ್ತು ಹುದ್ದೆ ಅನುಭವ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬೇಕಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು Kolar.nic.in/en/noticecategory/recruitments/ ಜಾಲತಾಣದಲ್ಲಿ ಪಡೆಯಬಹುದು.

ಇದನ್ನೂ ಓದಿ: ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಭರ್ಜರಿ ನೇಮಕಾತಿ: 4062 ಶಿಕ್ಷಕ, ಶಿಕ್ಷಕೇತರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

Last Updated : Jun 30, 2023, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.