ETV Bharat / state

ರಸ್ತೆ ವಿಸ್ತರಣೆ ವಿಚಾರದಲ್ಲಿ ತಾರತಮ್ಯ: ಬಡವರಿಗೊಂದು - ಶ್ರೀಮಂತರಿಗೊಂದು ನ್ಯಾಯ!

ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಭಿವೃದ್ಧಿ ಕಾಣುತ್ತಿದ್ದು, ರಸ್ತೆ ಅಗಲೀಕರಣದಲ್ಲಿ ಬಡವರ ಕಟ್ಟಡಗಳನ್ನು ಒಡೆಯುತ್ತಿದ್ದು, ಶ್ರೀಮಂತರ ಕಟ್ಟಡ ರಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

chitradurga
ರಸ್ತೆ ಅಗಲೀಕರಣದ ವಿಚಾರದಲ್ಲಿ ತಾರತಮ್ಯ
author img

By

Published : Sep 30, 2020, 7:35 PM IST

ಚಿತ್ರದುರ್ಗ: ಕರ್ನಾಟಕ ರಾಜ್ಯದ ಒಂದು ಹಳ್ಳಿ‌ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಹಿಂದುಳಿದಿರುವ ಜಿಲ್ಲೆಯಾಗಿದೆ. ಇದೀಗ ನಗರದ ಮುಖ್ಯ ರಸ್ತೆ ಅಭಿವೃದ್ಧಿ ಕಾಣುತ್ತಿದ್ದು, ರಸ್ತೆ ಅಗಲೀಕರಣದಲ್ಲಿ ಬಡವರ ಕಟ್ಟಡಗಳನ್ನು ಒಡೆಯುತ್ತಿದ್ದು, ಶ್ರೀಮಂತರ ಕಟ್ಟಡ ರಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ ನಗರದ ರಸ್ತೆ ಅಗಲೀಕರಣದ ವಿಚಾರದಲ್ಲಿ ತಾರತಮ್ಯದ ಆರೋಪ ಕೇಳಿ ಬಂದಿದೆ.

ನಗರದ ಬಿಡಿ ರಸ್ತೆ ಹಲವು ವರ್ಷಗಳ ಬಳಿಕ 18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಣುತ್ತಿದೆ. ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಕಟ್ಟಡಗಳನ್ನು ಒಡೆಯುವ ವಿಷಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 60 ಅಡಿ ಅಗಲದ ರಸ್ತೆಯಲ್ಲಿ ಎದುರಾಗುವ ಕೆಲ ಶ್ರೀಮಂತರ ಕಟ್ಟಡಗಳನ್ನು ಅಧಿಕಾರಿಗಳು ಉಳಿಸುವ ಪ್ರಯತ್ನ ಮಾಡುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಕೆಲ ಮಧ್ಯಮ ವರ್ಗದ ಜನರ ಕಟ್ಟಡಗಳನ್ನು ಅಧಿಕಾರಿಗಳು ಮುಲಾಜಿಲ್ಲದೇ ಒಡೆಯಲು ಮಾರ್ಕ್ ಮಾಡಿದ್ದಾರೆ.

ಇನ್ನು ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್​ಗೇಟ್​ನಿಂದ ಆರಂಭವಾಗಿರುವ ಈ ರಸ್ತೆ ಕಾಮಗಾರಿಯಲ್ಲಿ ಎದುರಾಗುವ ಪಂಚಾಕ್ಷರಿ ಕಲ್ಯಾಣ ಮಂಟಪ, ತರಳುಬಾಳು ಮಠಕ್ಕೆ ಸೇರಿದ ಶಾಲೆಗಳ ಮುಂಭಾಗವನ್ನು ಒಡೆಯಲು ಮಾರ್ಕ್ ಮಾಡಲಾಗಿತ್ತು. ಆದ್ರೇ ಇದೀಗ ಅ ಮಾರ್ಕ್ ಅ​ನ್ನು ಅಳಿಸಿ ಹಾಕಲಾಗಿದ್ದು, ಕಟ್ಟಡಗಳನ್ನು ಒಡೆಯದೇ ಹಾಗೇ ರಕ್ಷಿಸಲಾಗಿದೆ.

ಇನ್ನು ಮಧ್ಯಮ ವರ್ಗದ ಜನರಿಗೆ ಸೇರಿದ ಕಟ್ಟಡಗಳನ್ನು ಒಡೆಯಲು ಅಧಿಕಾರಿಗಳು ನೋಟಿಸ್ ನೀಡಿದ್ದು, ಚಳ್ಳಕೆರೆ ಟೋಲ್ ಗೇಟ್​ನಿಂದ ರಸ್ತೆಯ ಇಕ್ಕೆಲವನ್ನು 15 ಅಡಿಗೆ ಸೀಮಿತ ಮಾಡಿ ಬಡವರ ಕಟ್ಟಡಗಳನ್ನು ಒಡೆಯಲು ಸಂಚು ರೂಪಿಸಿದ್ದು, ಇತ್ತ ನಗರದ ಪ್ರವಾಸಿ ಮಂದಿರದಿಂದ ಮುಂದೆ 13/5 ವರೆ ಅಡಿಗೆ ಸೀಮಿತ ಮಾಡಿದ್ದರಿಂದ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಇದರ ಹಿಂದೆ ಶಾಸಕ ತಿಪ್ಪಾರೆಡ್ಡಿ ಅವರ ಕೈವಾಡವಿದೆ ಎಂದು ನಗರಸಭೆ ಸದಸ್ಯ ಆರೋಪ ಮಾಡಿದರು.

ಇದರ ಬಗ್ಗೆ ಈ ಹಿಂದೆ 31 ನೇ ಸಾರ್ವಜನಿಕರು ಹಳೆ ಜಿಲ್ಲಾಧಿಕಾರಿ ವಿನೋತ್‌ಪ್ರಿಯಾ ಅವರಿಗೆ ಸಂಪರ್ಕಿಸಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ಬೇಸತ್ತಿರುವ ಜನರು ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾ‌ಯನಾ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಟ್ಟಾರೆ ಶಾಸಕ ತಿಪ್ಪಾರೆಡ್ಡಿ ಅವರು 18 ಕೋಟಿ ರೂ. ತಂದು‌ ರಸ್ತೆ ಅಭಿವೃದ್ಧಿ ಮಾಡಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದನ್ನು ಗಮನಿಸಿರುವ ನಗರಸಭೆ ಸದಸ್ಯರಾದ ದೀಪಕ್​ ಇದರ ಹಿಂದೆ ಶಾಸಕರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.