ETV Bharat / state

ತಿಪ್ಪೇರುದ್ರಸ್ವಾಮಿ ಜಾತ್ರೆ ಈ ಬಾರಿ ಸರಳ ಆಚರಣೆ; ಹೊರರಾಜ್ಯದವರಿಗೆ ಅವಕಾಶವಿಲ್ಲ - DC appeals to devotees to celebrate fest with simple manner in wake of covid

ಪ್ರತಿವರ್ಷವೂ ನಾಯಕನಟ್ಟಿ ಜಾತ್ರೆ ಹಾಗೂ ಅದ್ದೂರಿ ರಥೋತ್ಸವದಲ್ಲಿ ಭಾಗಿಯಾಗಲು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಅವರಿಗೆ ಅವಕಾಶವಿಲ್ಲ ಎಂದರು.

DC appeals to devotees to celebrate fest with simple manner in wake of covid
ಪ್ರಸಿದ್ಧ ತಿಪ್ಪೇರುದ್ರಸ್ವಾಮಿ ಜಾತ್ರೆ ಸರಳವಾಗಿ ಆಚರಿಸುವಂತೆ ಡಿಸಿ ಮನವಿ
author img

By

Published : Feb 25, 2021, 9:29 PM IST

ಚಿತ್ರದುರ್ಗ: ಮತ್ತೆ ಕೊರೊನಾ ಛಾಯೆ ಕವಿಯುವ ಸಾಧ್ಯತೆಯ ಹಿನ್ನೆಲೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಮನವಿ ಮಾಡಿದ್ದಾರೆ.

ಜಾತ್ರಾ ಮಹೋತ್ಸವ ಹಿನ್ನೆಲೆ ದೇವಾಲಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ರೂಪಾಂತರ ಕೊರೊನಾ ವೈರಸ್ ಹಬ್ಬುವ ತಜ್ಞರ ಅಭಿಪ್ರಾಯ ಮೇರೆಗೆ ಸ್ಥಳೀಯ ಜನರೊಂದಿಗೆ ಸಾಂಪ್ರದಾಯಿಕವಾಗಿ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ನಡೆಸುವಂತೆ ಮನವಿ ಮಾಡಿದ್ದಾರೆ.

ಇನ್ನು ಪ್ರತಿವರ್ಷವೂ ನಾಯಕನಟ್ಟಿ ಜಾತ್ರೆ ಹಾಗೂ ಅದ್ದೂರಿ ರಥೋತ್ಸವದಲ್ಲಿ ಭಾಗಿಯಾಗಲು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಅವರಿಗೆ ಅವಕಾಶವಿಲ್ಲ ಎಂದರು.

ಸಾಂದ್ರಾದಾಯಿಕವಾಗಿ ಸಣ್ಣ ಪ್ರಮಾಣದಲ್ಲಿ ರಥೋತ್ಸವ ನಡೆಯಬೇಕು, ಜಾತ್ರೆಯಲ್ಲಿ ಚಳ್ಳಕೆರೆ ತಾಲೂಕಿನ ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಪೊಲೀಸ್ ಭದ್ರತೆ ನಡುವೆ ಸಿಮೀತ ಜನರಿಗೆ ಮಾತ್ರ ಅವಕಾಶ ನೀಡಿ ಸರಳವಾಗಿ ಜಾತ್ರೆ ನಡೆಸುವಂತೆ ಜನರಿಗೆ ಜಿಲ್ಲಾಧಿಕಾರಿ ಕವಿತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಶಾಸಕ ತಿಪ್ಪಾರೆಡ್ಡಿ, ಪರಿಸರ ಪ್ರೇಮಿ ನಡುವಿನ ಫೋನ್ ಸಂಭಾಷಣೆ ಆಡಿಯೋ ವೈರಲ್: ಏನಿದೆ ಗೊತ್ತಾ ಇದರಲ್ಲಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.