ETV Bharat / state

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ: ರಾಜ್ಯದಲ್ಲೇ ಹೆಸರುವಾಸಿ ಮಧ್ಯ ಕರ್ನಾಟಕದ ದಸರಾ - Dasara news

ನಗರದ ಮುರುಘಾ ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ದಸರಾ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಶರಣಸಂಸ್ಕೃತಿ ಉತ್ಸವವನ್ನು ದಸರಾ ರೀತಿಯಲ್ಲೇ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ
author img

By

Published : Oct 8, 2019, 8:17 PM IST

Updated : Oct 8, 2019, 11:39 PM IST

ಚಿತ್ರದುರ್ಗ : ನಗರದ ಮುರುಘಾ ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ದಸರಾ ರಾಜ್ಯದಲ್ಲೇ ಹೆಸರುವಾಸಿ. ಶರಣಸಂಸ್ಕೃತಿ ಉತ್ಸವವನ್ನು ದಸರಾ ರೀತಿಯಲ್ಲೇ ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ

ಒಟ್ಟು ಒಂಭತ್ತು ದಿನಗಳ ಕಾಲ ನಡೆಯುವ ಮಧ್ಯ ಕರ್ನಾಟಕದ ಖಾಸಗಿ ದರ್ಬಾರ್, ಮೈಸೂರು ದಸರಾದ ರೀತಿಯಲ್ಲೇ ಆಚರಣೆ ಮಾಡಲಾಗುತ್ತದೆ. ಮುರುಘಾ ಮಠದ ಅನುಭವ ಮಂಟಪದಲ್ಲಿ ನಾಡು, ನುಡಿ, ಸಾಹಿತ್ಯ, ಪರಂಪರೆಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ವಿಜಯದಶಮಿಯಂದು ಶ್ರೀ ಮಠದ ಆವರಣದಿಂದ ಕೋಟೆ ಮೇಲಿರುವ ಮೂಲ ಮುರುಘಾ ಮಠದವರೆಗೆ ಶ್ರೀಗಳನ್ನು ಬೆಳ್ಳಿ ರಥದ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಾಡಿನ ಅನೇಕ ಕಡೆಗಳಿಂದ ಆಗಮಿಸುವ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ‌ ಪಾಲ್ಗೊಂಡು ಉತ್ಸವಕ್ಕೆ ಕಳೆ ಕಟ್ಟುತ್ತವೆ. ಮುರುಘಾ ಮಠದ ಶೂನ್ಯ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಹೊತ್ತ ಬೆಳ್ಳಿಯ ರಥ ನಗರದ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೇ ಮಠದ ಭಕ್ತಾದಿಗಳು ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿಗೈಯುತ್ತಾರೆ.

ಈ ಉತ್ಸವದಲ್ಲಿ ವಿವಿಧ ಸ್ಥಬ್ದ ಚಿತ್ರಗಳು, ಕೋಲಾಟ, ಡೊಳ್ಳು ಕುಣಿತ, ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ನೃತ್ಯಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಮುರುಘಾ ಮಠದ ಆವರಣದಲ್ಲಿ ಜರಗುವ ಕಾರ್ಯಕ್ರಮಗಳನ್ನು ನೋಡಲು ಅನೇಕ ಭಕ್ತರು ಆಗಮಿಸುತ್ತಾರೆ.

Intro:ಚಿತ್ರದುರ್ಗದಲ್ಲಿ ಅದ್ದೂರಿ ದಸರಾ ಆಚರಣೆ :
ಹೇಗಿತ್ತು ಗೊತ್ತಾ ಮಧ್ಯ ಕರ್ನಾಟಕದ ದಸರಾ ವೈಭವ

ವಿಶೇಷ ವರದಿ

ಆ್ಯಂಕರ್:- ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾ ದೇಶದಲ್ಲೇ ಖ್ಯಾತಿ ಗಳಿಸಿದೆ. ಅಲ್ಲಿ ನಡೆಯುವ ಖಾಸಗಿ ದರ್ಬಾರ್ ರೀತಿಯಲ್ಲೇ ಮಧ್ಯ ಕರ್ನಾಟಕದ ಹೆಬ್ಬಾಗಿಲು ಚಿತ್ರದುರ್ಗದಲ್ಲು ಅದ್ದೂರಿ ದಸರಾ ನೆರವೇರುತ್ತದೆ. ಬಯಲು ಸೀಮೆಯ ದಸರಾ ಖ್ಯಾತಿಯ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಇಂದು ಸಡಗರ ಸಂಭ್ರಮದಿಂದ ನೆರವೇರಿತು, ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಬಗೆ ಬಗೆಯ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿತ್ತು.

ಲುಕ್....

ಫ್ಲೋ....

ವಾಯ್ಸ್01:- ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ದಸರಾ ರಾಜ್ಯದಲ್ಲೇ ಹೆಸರು ವಾಸಿಯಾಗಿದೆ. ಶರಣಸಂಸ್ಕೃತಿ ಉತ್ಸವನ್ನು ದಸರಾ ರೀತಿಯಲ್ಲೇ ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.ಒಟ್ಟು ಒಂಭತ್ತು ದಿನಗಳ ಕಾಲ ನಡೆಯುವ ಮಧ್ಯ ಕರ್ನಾಟಕದ ಖಾಸಗಿ ದರ್ಬಾರ್ ಮೈಸೂರು ದಸರಾದ ರೀತಿಯಲ್ಲೇ ಆಚರಣೆ ಮಾಡಲಾಗುತ್ತದೆ. ಮುರುಘಾ ಮಠದ ಅನುಭವ ಮಂಟಪದಲ್ಲಿ ನಾಡು ನುಡಿ ಸಾಹಿತ್ಯ ಪರಂಪರೆಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತದೆ. ನಂತರ ವಿಜಯದಶಮಿಯಂದು ಶ್ರೀ ಮಠದ ಆವರಣದಿಂದ ಕೋಟೆ ಮೇಲಿರುವ ಮೂಲ ಮುರುಘಾ ಮಠದವರೆಗೆ ಶ್ರೀಗಳನ್ನು ಬೆಳ್ಳಿ ರಥದ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಉತ್ಸವದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ‌ ಪಾಲ್ಗೊಂಡು ಉತ್ಸವಕ್ಕೆ ಕಳೆ ಕಟ್ಟುತ್ತವೆ. ಮುರುಘಾ ಮಠದ ಶೂನ್ಯ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಹೊತ್ತ ಬೆಳ್ಳಿಯ ರಥ ನಗರದ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೇ ಮಠದ ಭಕ್ತಾದಿಗಳು ಹೆಲಿಕ್ಯಾಪ್ಟರ್ ಮೂಲಕ ಪುಸ್ಪಾವೃಷ್ಟಿಗೈಯುತ್ತಾರೆ. ಇದನ್ನೆಲ್ಲಾ ಕಣ್ತುಂಬಿಕೊಳ್ಳುವುದು ಸಾಮಾನ್ಯವಾಗಿದೆ.

ಫ್ಲೋ.....

ಬೈಟ್ 01:-ಜಿಹೆಚ್ ತಿಪ್ಪಾರೆಡ್ಡಿ, ಶಾಸಕರು, ಚಿತ್ರದುರ್ಗ.

ವಾಯ್ಸ್02:- ಇನ್ನೂ ಈ ಉತ್ಸವದಲ್ಲಿ ವಿವಿಧ ಸ್ಥಬ್ದ ಚಿತ್ರಗಳು, ಕೋಲಾಟ, ಡೊಳ್ಳು ಕುಣಿತ, ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ನೃತ್ಯಗಳು ನೋಡುಗರ ಕಣ್ಮನ ಸೆಳೆಯುತ್ತಾ ಮೈಸೂರು ದಸರಾ ಜಂಬೂಸವಾರಿಯನ್ನು ನೆನಪಿಸುತ್ತಿರುತ್ತದೆ.
ಮುರುಘಾ ಮಠದ ಆವರಣದಲ್ಲಿ ಜರಗುವ ಕಾರ್ಯಕ್ರಮಗಳನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. 9 ದಿನಗಳ ಕಾಲ ನಡೆಯುವ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ. ಉತ್ಸವಕ್ಕಾಗಮಿಸುವ ಭಕ್ತಾದಿಗಳಿಗೂ ಮುರುಘಾ ಮಠದಿಂದ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತಾ ಬಂದಿದ್ದು, ವಿಜಯ ದಶಮಿಯ ದಿನ ನಡೆಯುವ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ.

ಫ್ಲೋ....

ಬೈಟ್ 02:- ಮಂಜುಳಾ

ವಾಯ್ಸ್03:- ಒಟ್ಟಾರೆ ಸರಕಾರದ ಸೌಲತ್ತುಗಳಿಲ್ಲದೆ ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆಯುವ ನವರಾತ್ರಿ ಸಂಭ್ರಮ ಮತ್ತು ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆ ದಶಮಾನಗಳಿಂದ ಅದ್ಧೂರಿಯಾಗಿ ನೆರವೇರುತ್ತ ಬಂದಿದೆ. ದಸರಾ ನೋಡಲು ಮೈಸೂರಿಗೆ ಹೋಗಲು ಶಕ್ತರಲ್ಲದ ಬಯಲು ಸೀಮೆಯ ಸಹಸ್ರಾರು ಮಂದಿ ಚಿತ್ರದುರ್ಗದ ಮಿನಿ ದಸರಾ ಸಂಭ್ರವನ್ನು ಕಣ್ತುಂಬಿಕೊಳ್ತಾರೆ..

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ

Body:MiniConclusion:Dusara pkg
Last Updated : Oct 8, 2019, 11:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.