ಚಿತ್ರದುರ್ಗ: ಜಿಲ್ಲೆಯಲ್ಲಿಂದು 77 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗ ತಾಲೂಕಿನ 24, ಚಳ್ಳಕೆರೆ 10, ಹೊಸದುರ್ಗ 10, ಹಿರಿಯೂರು 17, ಹೊಳಲ್ಕೆರೆ 8, ಮೊಳಕಾಲ್ಮೂರು 8 ಸೇರಿದಂತೆ ಒಟ್ಟು 77 ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಮೊಳಕಾಲ್ಮೂರು ತಾಲೂಕಿನ 47 ವರ್ಷದ ವ್ಯಕ್ತಿ ಹಾಗೂ ಹಿರಿಯೂರು ಮೂಲದ 56 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಇದುವರೆಗೆ 11 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಒಟ್ಟು 546 ಜನರ ಗಂಟಲು, ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 77 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. 427 ಸೋಂಕಿತರ ಪೈಕಿ ಈಗಾಗಲೆ 151 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 268 ಸಕ್ರಿಯ ಪ್ರಕರಣಗಳಿವೆ.