ETV Bharat / state

ಅಧಿಕಾರಿಗಳ ನಿರ್ಲಕ್ಷ್ಯ, ಮಳೆ ಬಂದರೆ ಸಾಕು ಚಿತ್ರದುರ್ಗ ನಗರ ನಿವಾಸಿಗಳ ಪರದಾಟ... - Mallapur Lake Development

ಇತ್ತ ನಗರಕ್ಕೆ ಹೊಂದಿಕೊಂಡು ಮಲ್ಲಾಪುರ ಕೆರೆ ಇದೆ. ಈ ಕೆರೆಯಲ್ಲಿ ಸಾಮಾನ್ಯವಾಗಿ ನಗರದ ಚರಂಡಿ ನೀರು ಹೆಚ್ಚಾಗಿ ಸಂಗ್ರವಾಗುತ್ತದೆ. ನಗರಲ್ಲಿ ಸ್ವಲ್ಪ ಮಳೆಯಾದರೂ ಮಳೆ ನೀರು ಹಾಗೂ ಚರಂಡಿ ನೀರು ಏಕಾಏಕಿ ರಸ್ತೆಗಳಿಗೆ ನುಗ್ಗಿ ಸಾರ್ವಜನಿಕರು ಓಡಾಟ ನಡೆಸಲು ಹಿಂದೇಟು ಹಾಕುವಂತಾಗಿದೆ.

chitradurga-town-peoples-face-rain-effect-problems
ಚಿತ್ರದುರ್ಗ ನಗರ ನಿವಾಸಿಗಳ ಪರದಾಟ
author img

By

Published : Jan 8, 2021, 4:19 PM IST

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಮಳೆ ಬಂದರೆ ಸಾಕು, ನಿವಾಸಿಗಳು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನಗರದಲ್ಲಿ ಸ್ವಲ್ಪ ಮಳೆಯಾದರೂ ಸಾರ್ವಜನಿಕರು ಪರದಾಟ ನಡೆಸುವಂತಾಗಿದೆ.

ಚಿತ್ರದುರ್ಗ ನಗರ ನಿವಾಸಿಗಳ ಪರದಾಟ

ಓದಿ: ವಂಚನೆ ಆರೋಪಿ ಯುವರಾಜ್ ನನ್ನನ್ನೊಮ್ಮೆ ಭೇಟಿಯಾಗಿದ್ದ: ಡಿಸಿಎಂ ಲಕ್ಷ್ಮಣ ಸವದಿ

ನಗರದ ತುರುವನೂರು ರಸ್ತೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಸೇತುವೆ ನಿರ್ಮಿಸಿದೆ. ತುರುವನೂರು ಸುತ್ತಮುತ್ತಲಿನ ಗ್ರಾಮದ ಜನರು ಈ ರಸ್ತೆ ಮೂಲಕವೇ ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಾರೆ. ಆದರೆ ಸ್ವಲ್ಪ ಮಳೆಯಾದರೆ ಸಾಕು ಇಕ್ಕಟ್ಟಾಗಿರುವ ಸೇತುವೆಯಲ್ಲಿ ಮಳೆ ನೀರು ನುಗ್ಗಿ ಹಲವು ದಿನಗಳ ಕಾಲ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ಎರಡು ವರ್ಷಗಳಿಂದ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.

ಇತ್ತ ನಗರಕ್ಕೆ ಹೊಂದಿಕೊಂಡು ಮಲ್ಲಾಪುರ ಕೆರೆ ಇದೆ. ಈ ಕೆರೆಯಲ್ಲಿ ಸಾಮಾನ್ಯವಾಗಿ ನಗರದ ಚರಂಡಿ ನೀರು ಹೆಚ್ಚಾಗಿ ಸಂಗ್ರವಾಗುತ್ತದೆ. ನಗರಲ್ಲಿ ಸ್ವಲ್ಪ ಮಳೆಯಾದರೂ ಮಳೆ ನೀರು ಹಾಗೂ ಚರಂಡಿ ನೀರು ಏಕಾಏಕಿ ರಸ್ತೆಗಳಿಗೆ ನುಗ್ಗಿ ಸಾರ್ವಜನಿಕರು ಓಡಾಟ ನಡೆಸಲು ಹಿಂದೇಟು ಹಾಕುವಂತಾಗಿದೆ.

ಇತ್ತ ಅಧಿಕಾರಿಗಳು ಮಲ್ಲಾಪುರ ಕೆರೆ ಅಭಿವೃದ್ಧಿ ಪಡಿಸದಿರುವುದೇ ಇಷ್ಟೆಲ್ಲ ಅವಾಂತರ ಸೃಷ್ಟಿಗೆ ಕಾರಣವಾಗುತ್ತಿದೆ. ತಕ್ಷಣವೇ ಅಧಿಕಾರಿಗಳು ಕೆರೆ ಹೂಳು ತೆಗೆಸಿ, ರಸ್ತೆಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.