ಚಿತ್ರದುರ್ಗ: ಜೋಗಿಮಟ್ಟಿ ವನ್ಯಜೀವಿ ಧಾಮವನ್ನು ವೀಕ್ಷಿಸಲು ವರ್ಷವಿಡೀ ಸಾವಿರಾರು ಪ್ರವಾಸಿಗರ ದಂಡು ಹರಿದುಬರುತ್ತೆ. ಅದ್ರೆ, ಈ ಪ್ರವಾಸಿ ತಾಣದ ಅಭಿವೃದ್ಧಿಗೆ ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಜೋಗಿಮಟ್ಟಿ ವನ್ಯಜೀವಿ ಧಾಮದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಜೋಗಿಮಟ್ಟಿ ಅರಣ್ಯ ಪ್ರದೇಶಲ್ಲಿ ನೂರಾರು ಕಾಡು ಪ್ರಾಣಿಗಳು ವಾಸ ಮಾಡುತ್ತಿವೆ. ಪಕ್ಕದಲ್ಲಿ ವನ್ಯಜೀವಿ ಧಾಮ ಅರಣ್ಯ ಇಲಾಖೆ ನಿರ್ಮಾಣ ಮಾಡಲಾಗಿದೆ. ಆದ್ರೆ ಧಾಮದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗುತ್ತಿದೆ ಎಂಬ ಆರೋಪಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.
ಸ್ಥಳೀಯರು ಹೇಳೋದೇನು?
ಬರದ ನಾಡಿನಲ್ಲಿ ಮಲೆನಾಡಿನ ಅನುಭವ ನೀಡುವ ಜೋಗಿಮಟ್ಟಿ ವನ್ಯಜೀವಿ ಧಾಮಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿಪಡಿಸಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಪ್ರತಿ ವರ್ಷ ಅಭಿವೃದ್ಧಿಗೆ ಕೇವಲ 2-3 ಕೋಟಿ ರೂ. ಹಣ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ ಎಂದು ಕೋಟೆನಾಡಿನ ಜನತೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2020ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ವನ್ಯಜೀವಿ ಧಾಮದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದರೂ ಕೂಡ ಸರ್ಕಾರ ಮಾತ್ರ ಅಸಡ್ಡೆ ಧೋರಣೆ ಅನುಸರಿಸುತ್ತಿದೆ ಎಂಬುದು ಕೋಟೆನಾಡಿನ ಜನರ ಆರೋಪ.
ಇದನ್ನೂ ಓದಿ: ಮಂಗಳೂರು-ಬೆಂಗಳೂರು ರಾ.ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಸಂಚಾರಕ್ಕೆ ಅಡಚಣೆ
ಅರಣ್ಯಾಧಿಕಾರಿಗಳ ಮಾತೇನು?
ಈ ಮೊದಲು ಸರ್ಕಾರ ಕೇವಲ 1.30 ಕೋಟಿ ರೂ. ಅನುದಾನ ಮಾತ್ರ ಜೋಗಿಮಟ್ಟಿಗೆ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 2020ನೇ ಸಾಲಿನಲ್ಲಿ ಧಾಮದ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ 2.50 ಕೋಟಿ ರೂ. ಹಣ ನೀಡುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆಯಂತೆ. ಆದ್ರೆ 80 ಲಕ್ಷ ರೂ. ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗಾಗಿ ವನ್ಯಜೀವಿ ಧಾಮದ ಪ್ರಮುಖ ಅಭಿವೃದ್ಧಿಗೆ ಮಾತ್ರ ಹಣ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.