ಚಿತ್ರದುರ್ಗ : ಬೇರೆ ಮದುವೆಯಾಗಿದ್ದ ಪ್ರೇಯಸಿಯನ್ನು ನಂಬಿಸಿ ಗಂಡನಿಂದ ಬೇರ್ಪಡಿಸಿ 5 ವರ್ಷಗಳ ಕಾಲ ಸಂಸಾರ ನಡೆಸಿದ ಯುವಕ ಕೈಕೊಟ್ಟು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಪಟ್ಟಣದ ಹುನುಮಂತ ನಗರದ ಯುವತಿಯೊಬ್ಬಳನ್ನು ಮಂಜುನಾಥ್ ಎಂಬ ಯುವಕ ಪ್ರೀತಿಸುತ್ತಿದ್ದ. ಈ ಯುವತಿ ಬೇರೆ ಮದುವೆಯಾದರೂ ಕೂಡಾ ಗಂಡನಿಂದ ಆಕೆಯನ್ನು ಬೇರ್ಪಡಿಸಿ 5 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದಾನೆ. ಈ ನಡುವೆ ಯುವತಿ ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದ್ರೆ ಸಬೂಬು ಹೇಳಿಕೊಂಡೇ ಬಂದ ಆರೋಪಿ ಆಕೆಯ ಜೊತೆಯಲ್ಲಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಮಂಜುನಾಥ್‌ಗೆ ಈ ಮೊದಲೇ ಮತ್ತೊಂದು ಮದುವೆಯಾಗಿರುವ ವಿಷಯ ನನಗೆ ಗೊತ್ತಿರಲಿಲ್ಲ. ವಿಚಾರ ತಿಳಿದ ಮೇಲೆ ಮದುವೆಯಾಗುವಂತೆ ಪಟ್ಟು ಹಿಡಿದಾಗ ನನಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಒಂದೂವರೆ ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇನೆ, ಆದರೆ ಪೊಲೀಸರು ಆರೋಪಿ ಜೊತೆ ಶಾಮೀಲಾಗಿ ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಆತನ ವಿರುದ್ದ ಎಫ್ಐಆರ್ ಮಾಡಿ, ನನಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಠಾಣೆ ಮುಂದೆಯೇ ವಿಷ ಕುಡಿಯುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.