ETV Bharat / state

ಹಟ್ಟಿ ಚಿನ್ನಕ್ಕೆ ಮರುಜೀವ ತುಂಬುವ ಮುನ್ಸೂಚನೆ: ಸಂತಸದಲ್ಲಿ ಚಿತ್ರದುರ್ಗದ ಜನರು

author img

By

Published : Feb 9, 2021, 9:46 PM IST

ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ 10 ಕಿ.ಮೀ. ಅಂತರದ ಇಂಗಳದಾಳ್ ಗ್ರಾಮದಲ್ಲಿ ಸರ್ಕಾರದ ಒಡೆತನದ ಹಟ್ಟಿ ಚಿನ್ನದ ಗಣಿ ಇದೆ. ಮಣ್ಣಲ್ಲಿ ಚಿನ್ನ ಹುಡುಕುವ ಉದ್ಯೋಗ ನಂಬಿಕೊಂಡು ಸಾವಿರಾರು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆದರೆ ಸರ್ಕಾರ ಹಟ್ಟಿ ಚಿನ್ನದ ಗಣಿ ಕಾರ್ಯಭಾರ ಸ್ಥಗಿತಗೊಳಿದ ಪರಿಣಾಮ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

chitradurga-hatti-is-a-gold-mine-re-open-news
ಹಟ್ಟಿ ಚಿನ್ನಕ್ಕೆ ಮರುಜೀವ ತುಂಬುವ ಮುನ್ಸೂಚನೆ

ಚಿತ್ರದುರ್ಗ: ಹಟ್ಟಿ ಚಿನ್ನದ ಗಣಿ ಸದ್ಯ ಪಾಳು ಬಿದ್ದ ಕೊಂಪೆಯಂತಾಗಿದೆ. ಚಿನ್ನದ ಕಾರ್ಖಾನೆ ನಂಬಿಕೊಂಡು ದುಡಿಮೆ ಮಾಡಿ, ಚಿನ್ನದಂತಹ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ಸರ್ಕಾರ ಕಾರ್ಖಾನೆ ಕೆಲಸ ಸ್ಥಗತಗೊಳಿಸಿದ ಪರಿಣಾಮ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಅದೇ ಚಿನ್ನದ ಗಣಿ ಕಾರ್ಖಾನೆ ಮತ್ತೆ ಆರಂಭಿಸುವ ಮಾತುಗಳು ಕೇಳಿ ಬಂದಿದ್ದು, ಕೋಟೆನಾಡಿನ ಸಂತಸಗೊಂಡಿದ್ದಾರೆ.

ಹಟ್ಟಿ ಚಿನ್ನಕ್ಕೆ ಮರುಜೀವ ತುಂಬುವ ಮುನ್ಸೂಚನೆ

ಓದಿ: ವಿಮಾನದ ಮೂಲಕ ಸಾಗಿಸಲು ಸಜ್ಜಾಗಿದ್ದ 5.1 ಕೋಟಿ ರೂ. ಮೌಲ್ಯದ ಗಾಂಜಾ-ಡ್ರಗ್ಸ್​​ ವಶ!

ಇತಿಹಾಸ:

ಸ್ಥಳ: ಹಟ್ಟಿ ಚಿನ್ನದ ಗಣಿ, ಇಂಗಳದಾಳ್

ಆರಂಭ: 1964-65

ಸ್ಥಗಿತ: 2002

ಚಿನ್ನ ಮತ್ತು ತಾಮ್ರವನ್ನು ಒಟ್ಟಿಗೆ ನೀಡುತ್ತಿದ್ದ ರಾಜ್ಯದ ಏಕೈಕ ಗಣಿ

(1995ರಲ್ಲಿ ನಿಕ್ಷೇಪದಲ್ಲಿ ಚಿನ್ನ ಪತ್ತೆ)

ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ 10 ಕಿ.ಮೀ. ಅಂತರದ ಇಂಗಳದಾಳ್ ಗ್ರಾಮದಲ್ಲಿ ಸರ್ಕಾರದ ಒಡೆತನದ ಹಟ್ಟಿ ಚಿನ್ನದ ಗಣಿ ಇದೆ. ಮಣ್ಣಲ್ಲಿ ಚಿನ್ನ ಹುಡುಕುವ ಉದ್ಯೋಗ ನಂಬಿಕೊಂಡು ಸಾವಿರಾರು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆದರೆ ಸರ್ಕಾರ ಹಟ್ಟಿ ಚಿನ್ನದ ಗಣಿ ಕಾರ್ಯಭಾರ ಸ್ಥಗಿತಗೊಳಿದ ಪರಿಣಾಮ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಾರ್ಖಾನೆ ಬಂದ್ ಮಾಡಿದ ಪರಿಣಾಮ ಜಿಲ್ಲೆಯ ಯುವ ಸಮೂಹ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇನ್ನು ಕಾರ್ಮಿಕರಿಗೆಂದು ಲಂಬಾಣಿಹಳ್ಳಿ ರಸ್ತೆ ನಿರ್ಮಸಿದ ಕಾರ್ಮಿಕ ವಸತಿ ಗೃಹಗಳು ಅಳವಿನಂಚಿಗೆ ತಲುಪಿವೆ. ಇನ್ನು ಹಲವು ವರ್ಷಗಳಿಂದ ಕಾರ್ಖಾನೆ ಕಾರ್ಯ ಸ್ಥಗಿತ ಪರಿಣಾಮ ಮುಳ್ಳುಗಂಟಿ ಬೆಳೆದು ನಿಂತಿವೆ. ಅಲ್ಲದೆ ಕಾರ್ಖಾನೆ ಪಾಳು ಬಿದ್ದಂತೆ ಕಾಣುತ್ತಿದೆ ಎಂದು ಇಂಗಳದಾಳ್ ಗ್ರಾಮಸ್ಥರು ಆರೋಪ ಮಾಡುತ್ತಿದ್ದು, ರೋಗಗ್ರಸ್ಥ ಹಟ್ಟಿ ಚಿನ್ನದ ಗಣಿ ಪುನಃ ಕಾರ್ಯಾರಂಭ ಆಗುತ್ತಾ ಎನ್ನುವ ಮಾತುಗಳು ಕೋಟೆನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಚಿನ್ನದ ಗಣಿ ಆರಂಭಿಸುವಂತೆ ಜನರ ಒತ್ತಾಯ:

ಇಂಗಳದಾಳ್ ಗ್ರಾಮದಲ್ಲಿರುವ ಚಿನ್ನದ ಕಾರ್ಖಾನೆ ಮರು ಆರಂಭಿಸುವಂತೆ ಜಿಲ್ಲೆಯ ಜನತೆ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ‌ ಹೋರಾಟ ಮಾಡಿಕೊಂಡು ಬಂದಿದ್ದು, ಕಾರ್ಖಾನೆ ಮತ್ತೆ ಕಾರ್ಯಾರಂಭಗೊಂಡರೆ ಜಿಲ್ಲೆಯ ಜನತೆಗೆ ಉದ್ಯೋಗ ಸಿಗುತ್ತದೆ. ಅಲ್ಲದೆ ಚಿನ್ನ ಹಾಗೂ ತಾಮ್ರ ಕೋಟೆನಾಡಿನಲ್ಲಿ ಉತ್ಪಾದನೆ ಮಾಡಿದರೆ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೋಟೆನಾಡಿನ ಜನರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಚಿನ್ನದ ಗಣಿ ಆರಂಭಿಸುವ ಕುರಿತು ಸಚಿವರು ಹೇಳೋದೇನು?

ಕಳೆದ ವಾರ ಕೋಟೆನಾಡಿಗೆ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುರಗೇಶ್ ನಿರಾಣಿ, ಹಟ್ಟಿ ಚಿನ್ನದ ಗಣಿ ಕಾರ್ಯಾರಂಭದ ಕುರಿತು ಹೇಳಿದ್ದಾರೆ. ಅಧಿಕಾರಿಗಳಿಂದ ಚಿನ್ನದ ಗಣಿಯ ಮಾಹಿತಿ ಕೇಳಿದ್ದೇನೆ. ಸದ್ಯದಲ್ಲಿ ಕಡಿಮೆ ಖರ್ಚಿನಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಕುರಿತು ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಕೇಳಿರುವೆ ಎಂದು ಸಚಿವರೇ ಹೇಳಿದ್ದಾರೆ. ಇತ್ತ ಬರುವ 15 ದಿನಗಳಲ್ಲಿ ತಂತ್ರಜ್ಞರಿಂದ ಕಾರ್ಖಾನೆ ಸಂಪೂರ್ಣ ಮಾಹಿತಿ ಪಡೆದು, ರೋಗಗ್ರಸ್ಥ ಕಾರ್ಖಾನೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದಿದ್ದಾರೆ. ಅಲ್ಲದೆ ಘಟಕ್ಕೆ ಭೇಟಿ ನೀಡಿದ ಬಳಿಕ ಕಾರ್ಖಾನೆ ಕಾರ್ಯಾರಂಭ ಬಗ್ಗೆ ಮಾಹಿತಿ ನೀಡುವೆ ಎಂದು ಸಚಿವರು ಹೇಳಿಕೆ‌ ಜಿಲ್ಲೆಯ ಜನತೆ ಸಂತಸಕ್ಕೆ ಕಾರಣವಾಗಿದೆ.

ಸಚಿವರ ಮಾತಿಗೆ ಜಿಲ್ಲೆಯ ಜನತೆಯ ಸಂತಸ:

ಬರದ ನಾಡು ಎಂಬ ಹಣೆಪಟ್ಟಿಗೆ ತುತ್ತಾದ ಕೋಟೆನಾಡಿನಲ್ಲಿ ಕೈಗಾರಿಗಳ ಕೊರೆತೆಯಿದೆ‌. ಹೀಗಾಗಿ ಉದ್ಯೋಗ ಅರಸಿಕೊಂಡು ಪಟ್ಟಣಗಳಿಗೆ ಚಿತ್ರದುರ್ಗ ಜಿಲ್ಲೆಯ ಯುವ ಸಮೂಹ ಹೋಗುತ್ತದೆ. ಈ ನಡುವೆ ಹಟ್ಟಿ ಚಿನ್ನದ ಗಣಿ ಆರಂಭದ ಕುರಿತು ಸಚಿವ ಮುರುಗೇಶ್ ನಿರಾಣಿ ಸುಳಿವು ನೀಡಿರುವುದು ಜಿಲ್ಲೆಯ ಜನತೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಆದಷ್ಟು ಬೇಗನೆ ಹಟ್ಟಿ ಚಿನ್ನದ ಗಣಿ ಆರಂಭಿಸಿ ಜಿಲ್ಲೆಯ ಜನತೆಗೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಕೋಟೆನಾಡಿನ ಜನರು ಒತ್ತಾಯ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.