ಚಿತ್ರದುರ್ಗ: ಡಿಸಿಆರ್ಬಿ ಬ್ರ್ಯಾಂಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿ ರಮೇಶ್(55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ವಾಯುವಿಹಾರ ಮುಗಿಸಿ ವಾಪಸ್ ಮನೆಗೆ ಬಂದ ರಮೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರೂ, ಮಾರ್ಗದಲ್ಲೇ ರಮೇಶ್ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: Live Video- ಮಾತನಾಡುತ್ತಲೇ ಬಾವಿಗೆ ಬಿದ್ದ ಸಹೋದರರು ಸಾವು
ಚಿತ್ರದುರ್ಗ ಎಸ್ಪಿ ರಾಧಿಕಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅವರ ಕಾರ್ಯವೈಖರಿ ನೋಡಿದ್ದ ಸಿಬ್ಬಂದಿ ವರ್ಗ, ಜೊತೆಗೆ ಕೆಲಸ ನಿರ್ವಹಿಸಿದ್ದವರು, ಸ್ನೇಹಿತರು ಕಂಬನಿ ಮಿಡಿದರು.