ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದೆ.
![Bustle in the Health Palm Program](https://etvbharatimages.akamaized.net/etvbharat/prod-images/kn-ctd-03-03-congress-gaddala-av-7204336_03092020140717_0309f_1599122237_454.png)
ನಗರದ ಉಮಾಪತಿ ಸಮುದಾಯ ಭವನದಲ್ಲಿ ಮಾಜಿ ಸಂಸದ ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಡಿಕಲ್ ಕಿಟ್ಗಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಜಬ್ಬರ್ ಹಾಗೂ ಕೈ ಪಕ್ಷದ ಜಿಲ್ಲಾಧ್ಯಕ್ಷ ತಾಜ್ ಪೀರ್ ಸೇರಿದಂತೆ ಚಳ್ಳಕೆರೆ ಶಾಸಕ ರಘುಮೂರ್ತಿಯವರ ನಡುವೆ ವಾಗ್ವಾದ ನಡೆದಿದೆ. ಜನರ ಆರೋಗ್ಯ ಪರಿಶೀಲಿಸಲು ರಾಜ್ಯ ಕೆಪಿಸಿಸಿಯಿಂದ ಕಳುಹಿಸಿಕೊಡಲಾಗಿರುವ ಆರೋಗ್ಯ ಹಸ್ತ ಕಿಟ್ಗಳನ್ನು ಜಿಲ್ಲಾ ಅಧ್ಯಕ್ಷರಾದ ತಾಜ್ ಪೀರ್ ಒಂದು ವಾರ್ಡಿನ ಕಿಟ್ಗಳನ್ನು ಮತ್ತೊಂದು ವಾರ್ಡಿಗೆ ನೀಡಿರುವುದನ್ನು ಖಂಡಿಸಿ ಜಬ್ಬರ್ ಗಲಾಟೆ ನಡೆಸಿದರು ಎನ್ನಲಾಗಿದೆ.
ಇನ್ನು ಶಾಂತಿ ಕಾಪಾಡುವಂತೆ ಮಧ್ಯಪ್ರವೇಶಿಸಿದ ಚಳ್ಳಕೆರೆ ಶಾಸಕ ರಘುಮೂರ್ತಿಯವರೊಂದಿಗೆ ವಾಗ್ವಾದಕ್ಕಿಳಿದ ಜಬ್ಬರ್ ಅವರನ್ನು ಇತರೆ ಕಾರ್ಯಕರ್ತರು ಸಮಾಧಾನಪಡಿಸಿದರು. ಪ್ರತಿಯೊಂದು ವಾರ್ಡ್ನಲ್ಲಿ ಜನರ ಅರೋಗ್ಯ ತಪಾಸಣೆ ನಡೆಸಲು ಕಳುಹಿಸಿಕೊಟ್ಟಿರುವ ಕಿಟ್ಗಳಿಗಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.