ETV Bharat / state

ಚಿತ್ರದುರ್ಗ: 17 ವರ್ಷದ ಹುಡುಗ ಹೃದಯಾಘಾತಕ್ಕೆ ಬಲಿ - chitradurga heart attack case

ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಕಾಶ್ ಎಂದಿನಂತೆ ನಿನ್ನೆ ಕಾಲೇಜಿಗೆ ಹೋಗಿದ್ದಾನೆ. ಆದ್ರೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾನೆ..

boy died by heart attack at chitradurga
ಚಿತ್ರದುರ್ಗ ಪ್ರಕಾಶ್ ಹೃದಯಾಘಾತಕ್ಕೆ ಬಲಿ
author img

By

Published : Nov 3, 2021, 6:57 AM IST

Updated : Nov 3, 2021, 12:06 PM IST

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಿನ್ನೆ 17 ವರ್ಷದ ಹುಡುಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಕಾಶ್ ಆರೋಗ್ಯವಾಗಿಯೇ ಇದ್ದ. ಎಲ್ಲ ಮಕ್ಕಳಂತೆ ಲವಲವಿಕೆಯಿಂದ ಇದ್ದ ಪ್ರಕಾಶ್ ಎಂದಿನಂತೆ ಬೆಳಗ್ಗೆ 8.30ಕ್ಕೆ ತಿಂಡಿ ತಿಂದು ಕಾಲೇಜಿಗೆ ಹೋಗಿದ್ದಾನೆ. ಆದರೆ, ಕಾಲೇಜಿಗೆ ಹೋದವನು ಅಸ್ವಸ್ಥನಾಗಿ ಬಳಿಕ ಉಸಿರೇ ನಿಲ್ಲಿಸಿದ್ದಾನೆ ಎನ್ನುತ್ತಾರೆ ಪ್ರಕಾಶ್ ಪಾಲಕರು.

ಬೆಳಗ್ಗೆ ಕಾಲೇಜಿಗೆ ಬಂದ ಪ್ರಕಾಶ್ ಮೆಟ್ಟಿಲೇರಿಕೊಂಡು ಕ್ಲಾಸ್ ರೂಮ್​ಗೆ ಹೋಗುವ ವೇಳೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ. ಆಗ ಜೊತೆಯಲ್ಲಿದ್ದ ಸ್ನೇಹಿತರು ಕಾಲೇಜು ಸಿಬ್ಬಂದಿ ಗಮನಕ್ಕೆ ತಂದು ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚಿತ್ರದುರ್ಗ ಪ್ರಕಾಶ್ ಹೃದಯಾಘಾತಕ್ಕೆ ಬಲಿ

ಅಷ್ಟರೊಳಗೆ ಪಾಲಕರು ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಚಿಕಿತ್ಸೆ ಆಗೋದಿಲ್ಲ, ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಪಾಲಕರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

ಆದರೆ, ಅಷ್ಟರೊಳಗೆ ಪ್ರಕಾಶ್ ಇಹಲೋಕ ತ್ಯಜಿಸಿದ್ದಾನೆ. ಬಳಿಕ ಪರೀಕ್ಷಿಸಿದ ವೈದ್ಯರು ಇದು ಹೃದಯ ಸ್ತಂಭನ ಎಂದು ಹೇಳಿದ್ದಾರೆ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲ ಕೊಟ್ರೇಶ್.

ಇದನ್ನೂ ಓದಿ: ಜೆಡಿಎಸ್​ಗೆ ಯಾವುದೇ ಭವಿಷ್ಯ ಇಲ್ಲ ಎಂದು ಈ ಫಲಿತಾಂಶದಿಂದ ಅರ್ಥ ಮಾಡಿಕೊಳ್ಳಬೇಕು : ಜಮೀರ್ ಅಹ್ಮದ್ ಖಾನ್

Last Updated : Nov 3, 2021, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.