ಚಿತ್ರದುರ್ಗ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸರ್ಕಾರಿ ಕಾರಿನಲ್ಲಿ ಬೀಟ್ಗೆ ತೆರಳುವುದು ಸಾಮಾನ್ಯ. ಅದ್ರೆ ಚಿತ್ರದುರ್ಗ ಜಿಲ್ಲಾ ಎಸ್ಪಿ ಜಿ.ರಾಧಿಕಾ, ಕಾರು ಬಿಟ್ಟು ಸೈಕಲ್ ಮೇಲೇರಿ ಬೀಟ್ಗೆ ತೆರಳುವ ಗಮನ ಸೆಳೆದರು.
ಬೆಳ್ಳಂ ಬೆಳಗ್ಗೆ ಸೈಕಲ್ ಮೇಲೇರಿ ಬೀಟ್ ಶುರು ಮಾಡಿದ ಎಸ್ಪಿ ರಾಧಿಕಾ ಅವರು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು. ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎನಿಸಿರುವ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಸ್ಥಳ ಪರಿಶೀಲನೆ ನಡೆಸಿದರು. ಜಾತ್ರೆ ನಡೆಯುವ ಪ್ರತಿಯೊಂದು ಸ್ಥಳಕ್ಕೂ ಕಾರಿನಲ್ಲಿ ಹೋಗಲು ಸಾಧ್ಯವಿಲ್ಲದ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿಗಳು ಈ ವಿನೂತನ ಪ್ರಯೋಗ ಮಾಡಿದ್ದಾರೆ.
ಎಸ್ಪಿಗೆ ಎಎಸ್ಪಿ ನಂದಗಾವಿ, ಡಿವೈಎಸ್ಪಿ ರೋಷನ್ ಬೇಗ್, ಪಿಎಸ್ಐ ರಘುನಾಥ್ ಸೇರಿದಂತೆ ಸಿಬ್ಬಂದಿ ಸಾಥ್ ನೀಡಿದರು.