ETV Bharat / state

ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ: ದಾವಣಗೆರೆ ವಿರಕ್ತ ಮಠದ ಬಸವಪ್ರಭು ಹೆಸರು ಅಂತಿಮ - ಮುರುಘಾಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ

ಮುರುಘಾಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರನ್ನು ಅಂತಿಮ ಮಾಡಲಾಗಿದೆ.

Basavaprabhushree of Davangere
ದಾವಣಗೆರೆ ವಿರಕ್ತ ಮಠದ ಬಸವಪ್ರಭು ಹೆಸರು ಅಂತಿಮ
author img

By

Published : Oct 16, 2022, 12:18 PM IST

Updated : Oct 17, 2022, 12:16 PM IST

ಚಿತ್ರದುರ್ಗ/ದಾವಣಗೆರೆ: ಮುರುಘಾ ಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ನಿರ್ಧಾರ ಮಾಡಲಾಗಿದ್ದು, ದಾವಣಗೆರೆಯ ವಿರಕ್ತ ಮಠದ ಬಸವಪ್ರಭು ಶ್ರೀ ಹೆಸರನ್ನು ಅಂತಿಮಗೊಳಿಸಲಾಗಿದೆ.

ಬಸವಪ್ರಭು ಶ್ರೀ ಹೆಸರು ಅಂತಿಮವಾಗುತ್ತಿದ್ದಂತೆ ಇದಕ್ಕೆ ವಿರೋಧ ಸಹ ವ್ಯಕ್ತವಾಗುತ್ತಿದೆ. ಇದಕ್ಕೆ ಮುರುಘಾ ಮಠದಲ್ಲಿ ದೀಕ್ಷೆ ಪಡೆದ ಸ್ವಾಮೀಜಿಗಳು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲಿಂಗಾಯತ ಮಠಾಧೀಶರು ಕೆಲವೇ ಕ್ಷಣಗಳಲ್ಲಿ ಈ ಸಂಬಂಧ ಗೌಪ್ಯ ಸಭೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಎಸ್‌ಜೆಎಂ ವಿದ್ಯಾಪೀಠದ ಅಧಿಕಾರ ಹಸ್ತಾಂತರಿಸಿದ ಮುರುಘಾ ಶರಣರು

ಈ ಬಗ್ಗೆ ಮುರುಘಾ ಶ್ರೀ, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರು ಹಾಗೂ ಕೆಲ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧಿಪತಿಯಾಗಿ ಬಸವಪ್ರಭು ಶ್ರೀಗಳ ಹೆಸರು ಅಂತಿಮ ಗೊಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ದಾವಣಗೆರೆಯಲ್ಲಿ ವಿರಕ್ತ ಪೀಠದ ಶ್ರೀ ಬಸವಪ್ರಭು ಸ್ವಾಮೀಜಿ ಬಹು ವರ್ಷಗಳಿಂದ ವಿರಕ್ತ ಮಠದ ಪೀಠಾಧಿಪತಿಯಾಗಿದ್ದಾರೆ.

ಇದರ ಬೆನ್ನಲ್ಲೇ ವಿರಕ್ತ ಪೀಠದಲ್ಲಿ ಶ್ರೀಗಳಿಗೆ ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರನ್ನಾಗಿ ನೇಮಕ‌ ಮಾಡುವಂತೆ ಭಕ್ತರಿಂದ ಒತ್ತಾಯಿಸಲಾಗುತ್ತಿದೆ. ಅಂತಿಮ ಹೆಸರು ಅವರದ್ದೇ ಇದೆ ಅವರನ್ನೇ ಆಯ್ಕೆ ಮಾಡಿ ಎಂಬ ಮಾತುಗಳು ಕೇಳಿಬರುತ್ತಿದೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ವ್ಯಕ್ತಿ ಬಸವಪ್ರಭು ಶ್ರೀಗಳು. ಅವರಿಗೆ ಪ್ರಭಾರ ಪೀಠಾಧ್ಯಕ್ಷ ಸ್ಥಾನ ನೀಡಿದರೆ ಇಡೀ ಜಿಲ್ಲೆಗೆ ಖುಷಿಯಾಗಲಿದೆ ಎಂಬುದು ವಿರಕ್ತ ಮಠದ ಭಕ್ತರ ಅಭಿಪ್ರಾಯವಾಗಿದೆ.

Last Updated : Oct 17, 2022, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.