ETV Bharat / state

ವೇದಾವತಿ ನದಿಗೆ ಬಿದ್ದು ಮಗು ಸಾವು, ತಾಯಿಯ ರಕ್ಷಣೆ

ಬಹಿರ್ದೆಸೆಗೆ ತೆರಳಿದ್ದ ಮಗು ಕಾಲು ಜಾರಿ ಬ್ಯಾರೇಜ್​ಗೆ‌ ಬಿದ್ದಿದೆ. ಬಳಿಕ ಮಗುವನ್ನು ರಕ್ಷಿಸಲು ತಾಯಿ ಕೂಡ ಬ್ಯಾರೇಜ್​ಗೆ ಹಾರಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ತಾಯಿ ಪಾರಾಗಿದ್ದಾರೆ. ಆದರೆ ಮಗು ಮೃತಪಟ್ಟಿದೆ.

Baby died by falling in Chitradurga ವೇದಾವತಿ ನದಿಗೆ ಬಿದ್ದು ಮಗು ಸಾವು
ವೇದಾವತಿ ನದಿಗೆ ಬಿದ್ದು ಮಗು ಸಾವು
author img

By

Published : Jan 11, 2021, 10:19 AM IST

ಚಿತ್ರದುರ್ಗ: ವೇದಾವತಿ ನದಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಹೊಸದುರ್ಗ ತಾಲೂಕು ಕೆಲ್ಲೋಡ್ ಬ್ಯಾರೇಜ್ ಬಳಿ ನಡೆದಿದೆ.

ಬಹಿರ್ದೆಸೆಗೆ ತೆರಳಿದ್ದ ಮಗು ಕಾಲು ಜಾರಿ ಬ್ಯಾರೇಜ್​ಗೆ‌ ಬಿದ್ದಿದೆ. ಬಳಿಕ ಮಗುವನ್ನು ರಕ್ಷಿಸಲು ತಾಯಿ ರಾಧಿಕಾ (24) ಕೂಡ ಬ್ಯಾರೇಜ್​ಗೆ ಹಾರಿದ್ದಾರೆ. ತಾಯಿ ನದಿಗೆ ಹಾರಿದ್ದನ್ನು ಕಂಡ ಸಾರ್ವಜನಿಕರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ತಾಯಿ ಪಾರಾಗಿದ್ದಾರೆ. ಆದರೆ ಮಗು ನಿಸರ್ಗ (2) ಮೃತಪಟ್ಟಿದೆ.

ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಹೊರತೆಗೆದಿದ್ದಾರೆ.‌ ಈ ಕುರಿತು ಶ್ರೀರಾಂಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದ ಜಿಡಿಪಿ ಭಾರಿ ಪ್ರಮಾಣದಲ್ಲಿ ಕುಸಿಯುವ ಆತಂಕ.. ಕಳವಳ ವ್ಯಕ್ತಪಡಿಸಿದ ಆರ್ಥಿಕ ಇಲಾಖೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.