ಚಿತ್ರದುರ್ಗ : ಕೋಟೆನಾಡಿನ ಅಮ್ಮನಹಟ್ಟಿ ಎನ್ನುವ ಗ್ರಾಮವನ್ನು ಸಂಪೂರ್ಣ ಮದ್ಯಮುಕ್ತವಾಗಿಸುವ ಮೂಲಕ ಯುವಕರ ತಂಡವೊಂದು ಮಾದರಿ ಗ್ರಾಮವನ್ನಾಗಿಸಿದೆ.
ಗ್ರಾಮವನ್ನು 71 ನೇ ಗಣರಾಜ್ಯೋತ್ಸವ ದಿನಚಾರಣೆಯಂದು ಮದ್ಯ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಯಿತು. ಈ ಗ್ರಾಮದಲ್ಲಿ ಶೇ90% ರಷ್ಟು ಜನ್ರು ಮದ್ಯದ ಅಮಲಿಗೆ ಬಿದ್ದಿದ್ದಾರೆ ಎಂದು ಅರಿತ ಈ ಗ್ರಾಮದ ಯುವಕರು ನಿರಂತರವಾಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಈ ಕೆಟ್ಟ ಚಟವನ್ನು ಹೋಗಲಾಡಿಸಿದ್ದಾರೆ.
ಇದೇ ವೇಳೆ ಮದ್ಯದ ಅಮಲಿಗೆ ಬೀಳುವುದಿಲ್ಲ ಎಂದು ಗ್ರಾಮಸ್ಥರಿಂದ ಯುವಕರು ಪ್ರತಿಜ್ಞಾವಿಧಿ ತೆಗೆದುಕೊಂಡರು. ಯುವಕರ ಹೋರಾಟದ ಫಲವಾಗಿ ಅಮ್ಮನಹಟ್ಟಿ ಮದ್ಯಮುಕ್ತ ಗ್ರಾಮವಾಗಿದ್ದು, ಮದ್ಯಮುಕ್ತ ಗ್ರಾಮ ಎಂದು ಯುವಕರು ಬೋರ್ಡ್ ಕೂಡ ಹಾಕಿದ್ದಾರೆ. ಮದ್ಯ ಮುಕ್ತ ಗ್ರಾಮಕ್ಕೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಸಾಥ್ ನೀಡಿದ್ದಾರೆ.