ETV Bharat / state

ಗ್ರಾಮಸ್ಥರ ಸುರಕ್ಷತೆ ಹಿನ್ನೆಲೆ:  ಜಮೀನಿನಲ್ಲಿ ಸ್ವಯಂ ಕ್ವಾರಂಟೈನ್ ಆದ ಯೋಧ - Chitradurgha yodha self quarantine news

ಜುಲೈ 5 ರಂದು ಉತ್ತರ ಪ್ರದೇಶದಿಂದ ರಜೆ ಮೇಲೆ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಯೋಧನೊಬ್ಬ ಜಮೀನಿನಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

Yodha
Yodha
author img

By

Published : Jul 11, 2020, 9:37 AM IST

ಚಿತ್ರದುರ್ಗ: ಹೊರ ರಾಜ್ಯದಿಂದ ಆಗಮಿಸಿದ ಯೋಧನೊಬ್ಬ ಗ್ರಾಮಸ್ಥರಿಗೆ ತೊಂದರೆ ನೀಡದೇ ಜಮೀನಿನಲ್ಲಿ ಸ್ವಯಂ ಆಗಿ ಕ್ವಾರಂಟೈನ್​​ಗೆ ಒಳಗಾಗಿ ಇತರರಿಗೂ ಮಾದರಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.

ಖಂಡೇನಹಳ್ಳಿ ಗ್ರಾಮದ ಯೋಧ ಯೋಗಿಶ್‌ ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ವಾರ ಜುಲೈ 5 ರಂದು ಉತ್ತರ ಪ್ರದೇಶದಿಂದ ರಜೆ ಮೇಲೆ ಊರಿಗೆ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರಿಗೆ ತೊಂದರೆ ನೀಡಬಾರದು ಎಂದು ನಿರ್ಧರಿಸಿದ ಯೋಧ ಯೋಗೇಶ್, ತಮ್ಮ ಜಮೀನಿನಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ಸ್ವಯಂ ಕ್ವಾರಂಟೈನ್​​​​ಗೆ ಒಳಗಾಗಿದ್ದಾರೆ.

ಇನ್ನು ಮಾಹಿತಿ ತಿಳಿದ ತಾಲೂಕಿನ ವೈದ್ಯರು ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.