ಚಿತ್ರದುರ್ಗ: ಏಕಾಏಕಿ ರಸ್ತೆ ಮಧ್ಯದಲ್ಲಿ 20ಕ್ಕೂ ಅಧಿಕ ಅಡಿ ಭೂ ಕುಸಿತವಾದ ಘಟನೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ.
ನಿತ್ಯ ಜನರು ಸಂಚರಿಸುವ ರಸ್ತೆಯಲ್ಲಿ ಏಕಾಏಕಿ ಭೂಕುಸಿತವಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸುಮಾರು 8 ಗ್ರಾಮಗಳ ಜನರು ಈ ರಸ್ತೆಯ ಮೂಲಕವೇ ಸಂಚಾರ ನಡೆಸುತ್ತಾರೆ. ಕಂದಕ ಮಾದರಿಯಲ್ಲಿ ರಸ್ತೆ ಬಿರಕು ಬಿಟ್ಟಿರುವುದನ್ನು ಕಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವೊಬ್ಬ ಅಧಿಕಾರಿಯೂ ಘಟನಾ ಸ್ಥಳದ ಪರಿಶೀಲನೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಭೂಕುಸಿತವಾಗಿರುವ ರಸ್ತೆಯಲ್ಲಿ ಸಿದ್ದಯ್ಯನಕೋಟೆ ಗ್ರಾಮದ ಜನರು ಮುಳ್ಳು ಹಾಕಿ ರಸ್ತೆಯಲ್ಲಿ ಓಡಾಟ ನಡೆಸುವ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.