ಚಾಮರಾಜನಗರ: ಕುಡಿದು ಗಲಾಟೆ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕುಡುಕನೋರ್ವ ಚೂರಿಯಿಂದ ಇರಿದ ಘಟನೆ ಕೊಳ್ಳೇಗಾಲ ತಾಲೂಕಿನ ಆಲನಹಳ್ಳಿಯಲ್ಲಿ ನಡೆದಿದೆ.
ಅದೇ ಗ್ರಾಮದ ತೋಟೇಶ್ (45) ಹಲ್ಲೆಗೊಳಗಾದ ವ್ಯಕ್ತಿ. ಕುಡಿದು ಬಂದು ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದ ಅಜಯ್ (27)ನನ್ನು ಯಾಕೆ ಕುಡಿದು ಗಲಾಟೆ ಮಾಡುತ್ತಿದ್ದೀಯಾ ಎಂದಿದ್ದಕ್ಕೆ ಏಕಾಏಕಿ ಚೂರಿ ಇರಿದು ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ತೋಟೇಶ ಹಾಗೂ ಅಜಯ್ಗೂ ಹಳೇ ವೈಷಮ್ಯ ಕೂಡ ಇತ್ತು ಎಂದು ತಿಳಿದು ಬಂದಿದೆ. ರಕ್ತದ ಮಡುವಿನಲ್ಲಿದ್ದ ತೋಟೇಶ್ನನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಅಜಯ್ ಪರಾರಿಯಾಗಿದ್ದಾನೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.