ಚಿತ್ರದುರ್ಗ : ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರುಗಳನ್ನು ಬಾಡಿಗೆಗೆಂದು ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಂಚಿಸುತ್ತಿದ್ದ ಆರೋಪಿಯನ್ನು ಭರಮಸಾಗರದ ಪೊಲೀಸರು ಬಂಧಿಸಿ, ಚಾಲಕಿ ಆರೋಪಿಯಿಂದ 70 ಲಕ್ಷ ಮೌಲ್ಯದ 12 ಕಾರುಗಳನ್ನು ವಶಕ್ಕೆ ಪಡೆದಿದಾದ್ದಾರೆ. ಆರೋಪಿ ಮಧು ಅಲಿಯಾಸ್ ಮಧುಕುಮಾರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
![A car theft accused arrested in Chitradurga](https://etvbharatimages.akamaized.net/etvbharat/prod-images/kn-ctd-01-02-carpkg-7204336_02112020195103_0211f_1604326863_115.jpg)
ಆರೋಪಿಯಿಂದ 70 ಲಕ್ಷ ಮೌಲ್ಯದ 12 ಕಾರುಗಳ ಜೊತೆಗೆ ಅಡವಿಟ್ಟಿದ್ದ 12 ಲಕ್ಷ ರೂ.ಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರುಗಳನ್ನು ಬಾಡಿಗೆಗೆಂದು ಪಡೆಯುತ್ತಿದ್ದ ಆರೋಪಿ ಮಧು ಕುಮಾರ್, ಕಾರು ಅಂತಾರಾಜ್ಯಗಳಲ್ಲಿ ಓಡಾಡಬೇಕು. ಹಾಗಾಗಿ, ಕಾರಿನ ಅಸಲಿ ದಾಖಲೆಗಳು ಬೇಕೆಂದು ಕಾರಿನ ಮಾಲೀಕರ ಬಳಿ ಲಾಬಿ ನಡೆಸಿ ಆರ್ಸಿ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದನು. ಹೀಗೆ ಕಾರಿನ ದಾಖಲೆಗಳನ್ನು ಪಡೆದು ತನ್ನದೆಂದು ಬೇರೆ ಕಾರು ಚಾಲಕರ ಬಳಿ ಬಿಂಬಿಸುವ ಮೂಲಕ ಕಾರುಗಳನ್ನು ಅಡವಿಟ್ಟು ಹಣ ಪಡೆದು ವಂಚಿಸುತ್ತಿದ್ದನು.
![A car theft accused arrested in Chitradurga](https://etvbharatimages.akamaized.net/etvbharat/prod-images/kn-ctd-01-02-carpkg-7204336_02112020195103_0211f_1604326863_739.png)
ಇನ್ನು ಕೆಲವರ ಬಳಿ ಈ ಕಾರು ನನ್ನದೆ, ಅದರೆ, ಬೇರೆಯವರ ಹೆಸರಿನಲ್ಲಿದೆ ಎಂದು ಹೇಳಿ 29 - 30 ಫಾರ್ಮ್ನಲ್ಲೇ ಮಾಲೀಕರ ಹೆಸರಿನ್ನು ನಕಲು ಮಾಡಿ ಮಾರಾಟಕ್ಕೂ ಮುಂದಾಗಿದ್ದನು. ಈ ಸಂದರ್ಭದಲ್ಲಿ ಖದೀಮನು ಪೊಲೀಸರ ಬಲೆಗೆ ಬಿದ್ದಿದ್ದಾನೆ.
![A car theft accused arrested in Chitradurga](https://etvbharatimages.akamaized.net/etvbharat/prod-images/kn-ctd-01-02-carpkg-7204336_02112020195103_0211f_1604326863_796.png)
ದಾವಣಗೆರೆ ಮೂಲದ ಕಾರು ಮಾಲೀಕರಿಗೆ ಹೆಚ್ಚು ಟೋಪಿ ಹಾಕಿರುವ ಆರೋಪಿ ಮಧು ಕುಮಾರ್, ಅದೇ ದಾವಣಗೆರೆಯ ನಿವಾಸಿ ಬಸವರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಮಾಲೀಕ ಬಸವರಾಜನಿಗೆ ಅತ್ತ ಕಾರನ್ನು ನೀಡದೇ ಇತ್ತ ಬಾಡಿಗೆ ಹಣವೂ ಕೊಡದೇ ಆರೋಪಿ ಸತಾಯಿಸುತ್ತಿದ್ದನು. ಇದರಿಂದ ಎಚ್ಚತ್ತ ಬಸವರಾಜ್ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಧು ಕುಮಾರ್ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.