ಚಿತ್ರದುರ್ಗ: ಇದುವರಿಗೂ ಜಿಲ್ಲೆಯಲ್ಲಿ 7798 ಕೊರೊನಾ ವಾರಿಯರ್ಸ್‌ಗೆ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಶೇ. 68ರಷ್ಟು ಲಸಿಕೆ ನೀಡಲಾಗಿದೆ ಎಂದು ಡಿಹೆಚ್ಒ ಡಾ. ಪಾಲಾಕ್ಷ ಈಟಿವಿ ಭಾರತಕ್ಕೆ ಹೇಳಿದರು.
ಜಿಲ್ಲೆಗೆ 11 ಸಾವಿರ ಡೋಸ್ ವ್ಯಾಕ್ಸಿನ್ ಬಂದಿದ್ದು, 198 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರಥಮ ಹಂತವಾಗಿ ಜಿಲ್ಲಾದ್ಯಂತ 13104 ಫ್ರಂಟ್ ಲೈನ್ ವಾರಿಯರ್ಸ್‌ಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿತ್ತು. ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗವಾಡಿ ಕಾರ್ಯಕರ್ತೆಯರು, ಪೌರಕರ್ಮಿಕರು ಸೇರಿದಂತೆ ಇತರೆ ಫ್ರಂಟ್ ಲೈನ್ ವಾರಿಯರ್ಸ್‌ಗೆ ಲಸಿಕೆ ಹಾಕಲಾಗುತ್ತಿದೆ. ನಂತರ ಇನ್ನುಳಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಓದಿ-ಪ್ರತಿಭಟನಾ ಸ್ಥಳ ತೆರವುಗೊಳಿಸುವಂತೆ ಸಿಂಘು ಗಡಿಯಲ್ಲಿ ಸ್ಥಳೀಯರ ಧರಣಿ
ಇನ್ನು ಜಿಲ್ಲೆಗೆ ಹೆಚ್ಚುವರಿಯಾಗಿ 4 ಸಾವಿರ ವ್ಯಾಕ್ಸಿನ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದ್ವಿತೀಯ ಹಂತವಾಗಿ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಸೇರಿದಂತೆ ಇತರೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುವುದು. ಫಲಾನುಭಿಗಳ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.