ಚಿತ್ರದುರ್ಗ: ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಜಾಜೂರು ಗ್ರಾಮದ ಚೇತನ್ ಕುಮಾರ್ ವಾಸುದೇವಮೂರ್ತಿ(30), ವೈ ಎಡ್ವಿನ್ ಯಲ್ಲಪ್ಪ(35) ಹಾಗೂ ಚಿತ್ರದುರ್ಗ ನಗರದ ಸಿ.ಪಿ. ಅರ್ಜುನ್(31) ಎಂಬ ಮೂವರು ಆರೋಪಿಗಳನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 40 ಸಾವಿರ ಮೌಲ್ಯದ 2 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ 1.50 ಲಕ್ಷ ಮೌಲ್ಯದ ಸ್ಯಾಂಟ್ರೋ ಕಾರು, ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಬಂಧಿತ ಆರೋಪಿಗಳು ಬಳ್ಳಾರಿ ಜಿಲ್ಲೆಯ ಕೊದ್ಲಿಗುಂದಿ ಗ್ರಾಮದ ಚಂದ್ರಣ್ಣ ಎಂಬ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾ ಸೊಪ್ಪು ಖರೀದಿಸಿ ತಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಹುಟ್ಟುಹಬ್ಬದ ವಿಶ್ ಮಾಡೋಕೆ ಬಂದು ಭಾವನನ್ನೇ ಕೊಂದ: ಸಿಲಿಕಾನ್ ಸಿಟಿಯಲ್ಲಿ ಮರ್ಯಾದಾ ಹತ್ಯೆ..?
ಇನ್ನೂ ಗಾಂಜಾ ಸಾಗಾಣಿಕೆ ಕುರಿತು ಬಂಧಿತರಿಂದ ಸಿಇಎನ್ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.