ಚಿತ್ರದುರ್ಗ: ಪುಲ್ವಾಮಾದಲ್ಲಿ ನಡೆದ ಉಗ್ರರ ರಣಹೇಡಿ ಕೃತ್ಯದಲ್ಲಿ ವೀರ ಮರಣವನ್ನಪ್ಪಿದ ಯೋಧರ ನಿಧಿಗೆ ಸಿರಿಗೆರೆ ಮಠದಿಂದ 10 ಲಕ್ಷ ರೂ. ನೀಡುತ್ತೇವೆ ಎಂದು ಪೀಠಾಧಿಪತಿ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತಿಳಿಸಿದರು.
ಮಠದಲ್ಲಿ ಮಾತನಾಡಿದ ಅವರು, ವೀರ ಯೋಧರ ತ್ಯಾಗ ಮತ್ತು ಬಲಿದಾನವೇ ನಮ್ಮ ನೆಮ್ಮದಿಗೆ ಕಾರಣ. ಅವರ ಕುಟುಂಬ ನೋವಿನಲ್ಲಿದೆ. ಮಠದಿಂದ ಯೋಧರ ನಿಧಿಗೆ 10 ಲಕ್ಷ ರೂ. ಕಳಿಸಲು ನಿರ್ಧರಿಸಿದ್ದೇವೆ. ಅದನ್ನು ಸಂಸದರು ಪ್ರಧಾನಮಂತ್ರಿ ಅವರಿಗೆ ತಲುಪಿಸಲಿ. ಇಂತಹ ದುರ್ಘಟನೆ ಮತ್ತೆ ಸಂಭವಿಸದಂತೆ ಎಚ್ಚರ ವಹಿಸಲಿ ಎಂದರು.
ಇನ್ನು ಹಣದ ಚೆಕ್ನನ್ನು ದಾವಣಗೆರೆ ಮತ್ತು ಚಿತ್ರದುರ್ಗದ ಸಂಸದರು ಖುದ್ದಾಗಿ ಮಾನ್ಯ ಪ್ರಧಾನಮಂತ್ರಿ ಅವರಿಗೆ ತಲುಪಿಸುವಂತೆ ಸೂಚಿಸಿದರು.