ETV Bharat / state

ಕೊರೊನಾ​ಗೆ ಹೆದರಿ ಕಾಡು ಸೇರಿದ್ದ ಯುವಕರು: ಬುದ್ಧಿ ಹೇಳಿ ಮನೆಗೆ ಬಿಟ್ಟ ಅರಣ್ಯಾಧಿಕಾರಿಗಳು!

author img

By

Published : Mar 30, 2020, 7:39 PM IST

ಮಹಾಮಾರಿ ಕೊರೊನಾ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೆಲ ಮಂದಿ ಈ ಸೋಂಕಿಗೆ ಹೆದರಿ ಏನೇನೋ ಅವಾಂತರ ಮಾಡಿಕೊಳ್ಳುತ್ತಿದ್ದಾರೆ. ಇಂಥದ್ದೊಂದು ಘಟನೆ ಚಿಕ್ಕಮಗಳೂರಿನಲ್ಲೂ ನಡೆದಿದೆ.

ಕಾಡು ಸೇರಿದ್ದ ಯುವಕರು
ಕಾಡು ಸೇರಿದ್ದ ಯುವಕರು

ಚಿಕ್ಕಮಗಳೂರು: ಕೊರೊನಾ ವೈರಸ್​ಗೆ ಹೆದರಿ ಎರಡು ದಿನಗಳ ಹಿಂದೆ ಕಾಡು ಸೇರಿದ್ದ ಯುವಕರಿಗೆ ಅರಣ್ಯಾಧಿಕಾರಿಗಳು ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಎಂಟು ಜನ ಯುವಕರು ಕೊರೊನಾ ವೈರಸ್​ಗೆ ಹೆದರಿ ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಅರಣ್ಯದಲ್ಲಿ ವಾಸ ಮಾಡಲು ಹೊರಟಿದ್ದರು. ಈ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸಿಬ್ಬಂದಿ ಅರಣ್ಯಕ್ಕೆ ತೆರಳಿ, ಕಾಡಿನಲ್ಲಿದ್ದ ಯುವಕರಿಗೆ ಎಚ್ವರಿಕೆ ನೀಡಿದ್ದಾರೆ. ಅಲ್ಲದೆ ಅವರಿಂದ ಮತ್ತೊಮ್ಮೆ ಕಾಡಿಗೆ ಬರೋದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಮನೆಗೆ ಕಳುಹಿಸಿದ್ದಾರೆ.

ಕೊರೊನಾ ವೈರಸ್​ಗೆ ಹೆದರಿ ಕಾಡು ಸೇರಿದ್ದ ಯುವಕರು

ಎರಡು ದಿನಗಳ ಹಿಂದೆ ಚಾರ್ಮಾಡಿ ಘಾಟಿಯ ಬಪ್ಲಿ ಅರಣ್ಯ ಪ್ರದೇಶಕ್ಕೆ ಹೋಗಿ ಈ ಯುವಕರು ಅಲ್ಲಿಯೇ ವಾಸವಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.