ETV Bharat / state

‘ತರೀಕೆರೆ ಶಾಸಕರಿಂದ ವಂಚನೆ ನಡೀತಿದೆ, ನ್ಯಾಯ ಕೊಡಿಸಿ’- ಸಿಎಂ ಪುತ್ರನೆದುರು ಮಹಿಳೆಯರ ಕಣ್ಣೀರು - Women cry in front of CM BSY son Vijayendra in Chikkamagaluru

ವಿಜಯೇಂದ್ರ ಅವರ ಕಾರಿನ ಹತ್ತಿರ ಬಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಸಿಎಂ ಪುತ್ರನೆದುರು ಮಹಿಳೆಯರ ಕಣ್ಣೀರು
ಸಿಎಂ ಪುತ್ರನೆದುರು ಮಹಿಳೆಯರ ಕಣ್ಣೀರು
author img

By

Published : Mar 15, 2021, 5:16 PM IST

ಚಿಕ್ಕಮಗಳೂರು : ಸಿಎಂ ಪುತ್ರ ವಿಜಯೇಂದ್ರ ಅವರ ಮುಂದೆ ನಾಯ್ಯಕ್ಕಾಗಿ ಮಹಿಳೆಯರು ಕಣ್ಣೀರು ಹಾಕಿದ್ದು, ನ್ಯಾಯ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ದುಃಖ ತೋಡಿಕೊಂಡರು.

ಸಿಎಂ ಪುತ್ರನೆದುರು ಮಹಿಳೆಯರ ಕಣ್ಣೀರು

ಚಿಕ್ಕಮಗಳೂರು ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಈ ಘಟನೆ ನಡೆದಿದ್ದು, ವಿಜಯೇಂದ್ರ ಅವರ ಕಾರಿನ ಹತ್ತಿರ ಬಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದು, ಸೂಕ್ತ ನ್ಯಾಯ ನೀಡುವಂತೆ ಸಿಎಂ ಪುತ್ರನಿಗೆ ಈ ಕುಟುಂಬ ಮನವಿ ಮಾಡಿದೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಚಿಕ್ಕಮಗಳೂರು ಮೂಲದ ಪ್ರಸನ್ನ ಎಂಬುವವರು ಜಮೀನು ಖರೀದಿ ಮಾಡಿದ್ದರು. 7 ವರ್ಷದ ಹಿಂದೆ ಪ್ರಸನ್ನ ಕುಟುಂಬ ಲಕ್ಕವಳ್ಳಿಯಲ್ಲಿ 50 ಎಕರೆ ಜಮೀನು ಖರೀದಿ ಮಾಡಿತ್ತು. ಆದರೆ ತರೀಕೆರೆ ಶಾಸಕ ಸುರೇಶ್ ಕುಟುಂಬದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಈ ಕುಟುಂಬ ಆರೋಪಿಸಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಶಾಸಕರು ಹಿಂಬಾಲಕರ ಮೂಲಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರನ ಮುಂದೆ ಪ್ರಸನ್ನ ಕುಟುಂಬ ಕಣ್ಣೀರು ಹಾಕಿ ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.