ಚಿಕ್ಕಮಗಳೂರು : ಕಾಫಿನಾಡಲ್ಲಿ ರಸ್ತೆಯುದ್ದಕ್ಕೂ ಕಾಡು ಪ್ರಾಣಿಗಳು ಮೊಬೈಲ್ ಕ್ಯಾಮಾರಾಗಳಿಗೆ ಪೋಸ್ ನೀಡಿವೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಡಂಚಿನ ಗ್ರಾಮವಾದ ಬಿದಿರು ತಳ ಗ್ರಾಮದಲ್ಲಿ ಏಕ ಕಾಲದಲ್ಲಿ ಹತ್ತಾರು ಜಾತಿಯ ಕಾಡು ಪ್ರಾಣಿಗಳು ರಸ್ತೆ ಬದಿಯಲ್ಲಿ ಗೋಚರವಾಗಿವೆ. ಮೊಬೈಲ್ ಕ್ಯಾಮರಾ ಆನ್ ಮಾಡುತ್ತಿದ್ದಂತೆಯೇ ಹೇಗ್ ಬೇಕಾದ್ರೂ ನಮ್ಮ ಚಿತ್ರಗಳನ್ನು ತೆಗೆದುಕೋ ಎನ್ನುವ ರೀತಿ ಪ್ರತಿ ಕಾಡು ಪ್ರಾಣಿಗಳು ಮೊಬೈಲ್ ಕ್ಯಾಮರಾಗೆ ಪೋಸ್ ನೀಡಿವೆ.
![Wild animals gives pose to the camera](https://etvbharatimages.akamaized.net/etvbharat/prod-images/4802824_jay.jpg)
![Wild animals gives pose to the camera](https://etvbharatimages.akamaized.net/etvbharat/prod-images/4802824_jayasdfa.jpg)
ಪ್ರಮುಖವಾಗಿ ಕಡವೆ, ಆನೆ ಹಾಗೂ ಆನೆ ಮರಿ ಸೇರಿ ಹತ್ತಾರೂ ಜಾತಿಯ ಪ್ರಾಣಿಗಳು ಕಾಣಿಸಿವೆ. ಇಂತಹ ಅಪರೂಪದ ದೃಶ್ಯಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಿದೆ. ಸ್ಥಳೀಯರಿಗೆ ಈ ದೃಶ್ಯ ಖುಷಿಕೊಟ್ಟಿವೆ.
![Wild animals gives pose to the camera](https://etvbharatimages.akamaized.net/etvbharat/prod-images/4802824_jaysdgsdgs.jpg)
![Wild animals gives pose to the camera](https://etvbharatimages.akamaized.net/etvbharat/prod-images/4802824_jayasd.jpg)
ಗ್ರಾಮದ ಸತೀಶ್ ಎಂಬುವರು ತೋಟಕ್ಕೆ ಹೋಗುವಾಗ ದಾರಿಯುದ್ದಕ್ಕೂ ಸೆರೆ ಸಿಕ್ಕ ಮಲೆನಾಡಿನ ದೃಶ್ಯಕಾವ್ಯದ ವಿಶೇಷ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.