ETV Bharat / state

ಚಿಕ್ಕಮಗಳೂರಲ್ಲಿ ಇಬ್ಬರಿಗೆ ಕೊರೊನಾ: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಲ್ಲಿ ಆತಂಕ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್​

ಕೊರೊನಾ ಆರಂಭವಾದ 55 ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್​ ಝೋನ್​ನಲ್ಲಿತ್ತು. ಆದರೆ ಇಂದು ಇಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಒಬ್ಬರು ಸರ್ಕಾರಿ ವೈದ್ಯರು, ಮತ್ತೊಬ್ಬರು ಗರ್ಭಿಣಿ ಎಂದು ತಿಳಿದು ಬಂದಿದೆ.

Two new corona case found in chikmagalur
ಚಿಕ್ಕಮಗಳೂರಿಗೂ ವಕ್ಕರಿಸಿದ ಕೊರೊನಾ
author img

By

Published : May 19, 2020, 1:33 PM IST

ಚಿಕ್ಕಮಗಳೂರು: ಇಲ್ಲಿಯವರೆಗೆ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್​ ಝೋನ್​ನಲ್ಲಿದ್ದ ಕಾಫಿ ನಾಡಿನಲ್ಲಿ ಇಂದು ಇಬ್ಬರಿಗೆ ಸೋಂಕು ತಗುಲಿದೆ.

ಕೊರೊನಾ ಆರಂಭವಾದ 55 ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್​ ಝೋನ್​ನಲ್ಲಿತ್ತು. ಆದರೆ ಇಂದು ಇಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಒಬ್ಬರು ಸರ್ಕಾರಿ ವೈದ್ಯರು, ಮತ್ತೊಬ್ಬರು ಗರ್ಭಿಣಿ ಎಂದು ತಿಳಿದು ಬಂದಿದೆ. ಇವರನ್ನು ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​​ ಮಾಡಲಾಗಿದೆ. ಇವರು ಮೂಡಿಗೆರೆ, ತರೀಕೆರೆ ಮೂಲದವರೆಂದು ತಿಳಿದು ಬಂದಿದೆ.

ಈ ಸಂಬಂಧ ಸೋಂಕಿತರು ವಾಸವಾಗಿದ್ದ ಪ್ರದೇಶವನ್ನು ಸಂಪೂರ್ಣ ಸೀಲ್​ ಡೌನ್ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಈ ಎರಡು ಕೊರೊನಾ ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.