ಚಿಕ್ಕಮಗಳೂರು : ಇಳೆಗೆ ಹಸಿರ ಬೆಚ್ಚನೆಯ ಹೊದಿಕೆ.. ಹಾದಿಯುದ್ದಕ್ಕೂ ದಟ್ಟ ಮಂಜಿನಾಟ. ವನರಾಶಿ ನಡುವಿಂದ ಸಾಗುವ ಬೆಳ್ಮುಗಿಲ ಸಾಲು.. ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯುವ ಜಲಧಾರೆಯ ಸೊಬಗು.
ಮಲೆನಾಡಲ್ಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ನಿಸರ್ಗ ಮಾತೆಯು ನೈಜ ಸೊಬಗಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ಹೊಸ ಲೋಕ ಸೃಷ್ಟಿಯಾಗಿದೆ. ಇಲ್ಲಿನ ಸೊಬಗ ಸವಿಯ ಬರುವ ಪ್ರವಾಸಿಗರಿಗೆಂದೇ ಇದೆ ಈ ವಿಶ್ರಾಂತಿ ಧಾಮ.
ಪ್ರವಾಸಿಗರ ಅನುಕೂಲಕ್ಕಾಗಿ ಮಲಯ ಮಾರುತ ಎಂಬ ವಿಶ್ರಾಂತಿ ಧಾಮವನ್ನೇನೋ ಇಲ್ಲಿ ನಿರ್ಮಿಸಲಾಗಿದೆ. ಆದ್ರೆ, ಈ ಕಟ್ಟಡವನ್ನು 25 ವರ್ಷಗಳ ಹಿಂದೆಯೇ ನಿರ್ಮಿಸಿದ ಕಾರಣ, ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.
ವಿಶ್ರಾಂತಿಧಾಮ ಕಟ್ಟಡದ ಸುತ್ತಲೂ ಪಾಚಿಕಟ್ಟಿದ್ದು, ಸುಣ್ಣಬಣ್ಣ ಕಾಣದೇ ವರ್ಷಗಳೇ ಕಳೆದಿವೆ. ಈ ಕಾರಣದಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಇಳಿದಿದೆ. ಇನ್ನಾದ್ರೂ ಮಲಯ ಮಾರುತದ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು.