ETV Bharat / state

ಕಾಫಿ ತೋಟದಲ್ಲಿ ಮತ್ತೆ ಕಾಣಿಸಿಕೊಂಡ ಹುಲಿಹೆಜ್ಜೆ: ಆತಂಕದಲ್ಲಿ ಚಿಕ್ಕಮಗಳೂರು ಜನತೆ - hosalli

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಲ್ಲಿ ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.

Tiger in chikkamagaluru
ಚಿಕ್ಕಮಗಳೂರಲ್ಲಿ ಮತ್ತೆ ಹುಲಿಹೆಜ್ಜೆ: ಆತಂಕದಲ್ಲಿ ಜನತೆ
author img

By

Published : Dec 26, 2019, 2:22 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದ ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.

ಕಳೆದ 15 ದಿನಗಳ ಹಿಂದೆ ಇದೇ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಇದೀಗ ಮತ್ತೆ ಭಾರತಿ ಬೈಲು, ಹೊಸಳ್ಳಿ, ಬೆಳಗೊಡು ಸುತ್ತಮುತ್ತಲ ಗ್ರಾಮದಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿರುವುದರಿಂದ ಈ ಭಾಗದ ಜನರಲ್ಲಿ ಆತಂಕ ಮನೆಮಾಡಿದೆ.

ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಸುದ್ದಿಮುಟ್ಟಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಹುಲಿಯ ಹೆಜ್ಜೆ ಗುರುತು ಎಂಬುದು ಖಾತರಿಯಾಗಿದೆ.

Intro:Kn_Ckm_06_Tiger_pugmark_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕಾಫೀ ತೋಟದ ಮಧ್ಯದ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ತೋಟದ ಮಾಲೀಕರಿಗೆ ಹಾಗೂ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಗ್ರಾಮಸ್ಥರಿಗೆ ಭಯವನ್ನು ಹುಟ್ಟಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀ ಭೈಲು ಗ್ರಾಮದಲ್ಲಿ ಈ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಈ ಹೆಜ್ಜೆ ಗುರುತು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.ಕಳೆದ 15 ದಿನಗಳ ಹಿಂದೇ ಇದೇ ಭಾಗದಲ್ಲಿ ಹುಲಿಯ ಹೆಜ್ಜೆಯ ಗುರುತ ನೋಡಿ ಇಲ್ಲಿನ ಜನರು ಭಯಗೊಂಡಿದ್ದರು.ಇಂದೂ ಮತ್ತೆ ಭಾರತೀ ಬೈಲು, ಹೊಸಳ್ಳಿ, ಬೆಳಗೊಡು ಸುತ್ತು ಮುತ್ತಲ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತುಗಳು ಹಲವಾರು ಭಾಗದಲ್ಲಿ ಕಾಣಿಸಿಕೊಂಡಿದೆ.ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ಸ್ಥಳೀಯರು ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಹುಲಿಯ ಹೆಜ್ಜೆ ಗುರುತು ಎಂದೂ ಖಾತರಿ ಪಡಿಸಿದ್ದಾರೆ....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.