ETV Bharat / state

ರಾತ್ರಿ ವೇಳೆ ಕೈಚಳಕ ತೋರಿಸ್ತಿದ್ದ ಬೈಕ್​​ ಕಳ್ಳನಿಗೆ ಕೊನೆಗೂ ಸಿಕ್ತು ಸೆರೆವಾಸ - ಆರೋಪಿ ಮುಸಾವೀರ್ ಪಾಷ

ಚಿಕ್ಕಮಗಳೂರು ನಗರದ ವಿವಿಧ ಭಾಗದಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸ್​ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

thief-arrest-in-chikmagalore-by-police
ರಾತ್ರಿ ವೇಳೆಯಲ್ಲಿ ಕೈಚಳ ತೋರಿಸ್ತಿದ್ದ ಬೈಕ್​​ ಕಳ್ಳನಿಗೆ ಕೊನೆಗೂ ಸಿಕ್ತು ಸೆರೆ ವಾಸ
author img

By

Published : Mar 4, 2020, 8:20 PM IST

ಚಿಕ್ಕಮಗಳೂರು: ನಗರದ ವಿವಿಧ ಭಾಗದಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ನಗರ ಪೊಲೀಸ್​ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 3 ಬೈಕ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಮುಸಾವೀರ್ ಪಾಷ ಎಂದೂ ಗುರ್ತಿಸಲಾಗಿದ್ದು, ನಗರದ ಷರೀಫ್ ಗಲ್ಲಿ ನಿವಾಸಿಯಾಗಿದ್ದಾನೆ. ಗೌರಿ ಕಾಲುವೆಯ ಮುಬೀಲ್ ಎಂಬ ವ್ಯಕ್ತಿಯ ಜೊತೆ ಸೇರಿ ಕಳೆದ 8 ತಿಂಗಳಲ್ಲಿ 4 ಬೈಕ್ ಗಳನ್ನು ನಗರದ ಕೆಎಸ್ಆರ್​​ಟಿಸಿ ಬಸ್ ನಿಲ್ಡಾಣ, ಕಲ್ಯಾಣ ನಗರ, ಬೈಪಾಸ್ ರಸ್ತೆ, ಹಾಗೂ ಹೌಸಿಂಗ್ ಬೋರ್ಡ್​ಗಳಲ್ಲಿ ಕಳ್ಳತನ ಮಾಡಿದ್ದಾನೆ.

ಅಲ್ಲದೇ ಆರೋಪಿಗಳು ಕಳ್ಳತನ ಮಾಡಿದ್ದ ಬೈಕ್​​ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡಿದ್ದರು. ಈ ವೇಳೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮುಸಾವೀರ್ ಪಾಷನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಮುಬಿಲ್ ತಲೆ ಮರೆಸಿಕೊಂಡಿರುವುದರಿಂದ ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.