ETV Bharat / state

20 ಕೋಟಿ ವೆಚ್ಚದಲ್ಲಿ ​ಸರ್ಕಾರಿ ವಸತಿ ಶಾಲೆ ನಿರ್ಮಾಣ: ಹೋಗಲು ರಸ್ತೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ

ಸರ್ಕಾರಿ ಶಾಲೆಯೊಂದಕ್ಕೆ ಹೋಗಲು ಸರಿಯಾದ ರಸ್ತೆ ಮಾರ್ಗವಿಲ್ಲದೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯವು ಪರದಾಡುತ್ತಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆ

author img

By

Published : Jun 14, 2023, 7:57 AM IST

ಚಿಕ್ಕಮಗಳೂರು: ಅದು ಬರೋಬ್ಬರಿ 20 ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆ. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಶಾಲೆಗೆ ಹೋಗಿ ಬರಲು ಸರಿಯಾದ ರಸ್ತೆಯೇ ಇಲ್ಲದಂತಾಗಿದೆ. 20 ಕೋಟಿಯ ಸರ್ಕಾರಿ ವಸತಿ ಶಾಲೆಗೆ 10 ಅಡಿ‌ ರಸ್ತೆ ಇಲ್ಲ.‌ ಖಾಸಗಿ ಜಮೀನು ಮಾಲೀಕ ರಸ್ತೆ ಬಿಡ್ತಿಲ್ಲ. ಸರ್ಕಾರಿ ಜಾಗದಲ್ಲಿ ಸರ್ಕಾರ ರಸ್ತೆ ಮಾಡ್ತಿಲ್ಲ. ಮಕ್ಕಳು, ಶಿಕ್ಷಕರು, ಪೋಷಕರು ಮಾತ್ರ ಕೂಗಳತೆ ದೂರದ ಶಾಲೆಗೆ ಹೋಗಲು ಸುತ್ತಿ ಬಳಸಿ ಬೇರೊಂದು ಮಾರ್ಗದಿಂದ ಹೋಗಬೇಕಾಗುತ್ತಿದೆ ಎಂಬ ಗೋಳು ಪೋಷಕರು ಮತ್ತು ಶಿಕ್ಷಕರದ್ದಾಗಿದೆ.

ಹೌದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆಗೆ ಸರಿಯಾದ ರಸ್ತೆ ಮಾರ್ಗವಿಲ್ಲದೇ ಕೂಗಳತೆ ದೂರದ ಶಾಲೆಗೆ ಸುಮಾರು 6 ಕಿ.ಮಿ ಸುತ್ತಿ ಬಳಸಿ ಬರಬೇಕಾಗಿದೆ. ಕಾರಣ ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ್ದಾರೆ.‌ ಹಾಗಾಗಿ 20 ಕೋಟಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲ.

ಅಧಿಕಾರಿಗಳ ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ ಇಂದು ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಆರು ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸ್ ಎನ್ನುವವರು, ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿದ್ದರು. ಬಳಿಕ ಶಾಲೆ ನಿರ್ಮಾಣ ಆಯ್ತು. ಆದರೆ, ಶಾಲೆಗೆ ಹೋಗಲು ಸರಿಯಾದ ರಸ್ತೆ ಮಾರ್ಗವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ರಘು ಎಂಬುವವರು ಮಾತನಾಡಿ, ತರೀಕೆರೆಯ ಈ ಶಾಲೆಗೆ ಮಕ್ಕಳು ಮುಖ್ಯರಸ್ತೆ ಮೂಲಕ ಬರುವುದು ತುಂಬಾ ಸಲೀಸು. ಆದರೆ, ಖಾಸಗಿ ಜಮೀನು ಮಾಲೀಕ ರಸ್ತೆಗೆ ಬೇಲಿ ಹಾಕಿರುವುದರಿಂದ ಮಕ್ಕಳು ಶಿಕ್ಷಕರು ಸುತ್ತಿಬಳಸಿ ಓಡಾಡುವಂತಾಗಿದೆ. ಸರ್ಕಾರಿ ದಾಖಲೆ ಪ್ರಕಾರ ಶಾಲೆಯ ಮುಖ್ಯ ರಸ್ತೆಗೆ ನಕಾಶೆಯಲ್ಲಿ ರಸ್ತೆ ಇದೆ.‌ ಸರ್ಕಾರ ಹಾಗೂ ಅಧಿಕಾರಿಗಳು ಕೂಡ ರಸ್ತೆ ನಿರ್ಮಾಣದ ಕುರಿತು ಜಮೀನು ಮಾಲೀಕನಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.

ತನಗೆ ಬೇಕಾದಾಗ ಬೇಲಿ ಹಾಕುವುದು, ಬೇಡವೆಂದಾಗ ಬೇಲಿ ತೆಗೆಯುತ್ತಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಸರ್ಕಾರಿ ದಾಖಲೆಯ ನಕಾಶೆಯಲ್ಲಿರೋ ರಸ್ತೆ ನಿರ್ಮಿಸಿ ಶಾಲೆಗೆ ಹೋಗುವ ಮಕ್ಕಳಿಗೆ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬಳಿಕ ಸುನೀಲ್ ಎಂಬುವವರು ಮಾತನಾಡಿ, ಕೋಟಿ - ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣವಾದರೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮೈಮರೆತ ಪರಿಣಾಮ ರಸ್ತೆ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯವೂ ಪರದಾಡಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗೆ ಸ್ಪಂದಿಸಿ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: NEET-UG Results: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ: ಇಬ್ಬರು ಟಾಪರ್ಸ್‌ಗೆ 99.99% ಅಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.