ETV Bharat / state

ಕೋವಿಡ್ ವಾರಿಯರ್​ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ತಿರುಗಿ ನೋಡದ ಆರೋಪ: ಹೀಗಿದೆ ತರೀಕೆರೆ ಶಾಸಕರ ಸ್ಪಷ್ಟನೆ!

ಅಪಘಾತದಿಂದ ಗಾಯಗೊಂಡು ಆರೋಗ್ಯಾಧಿಕಾರಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದರೂ ಕಾರಿನಿಂದ ಇಳಿದು ಬರದ ತರೀಕೆರೆ ಶಾಸಕರ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

Covid warrior accident
ಶಾಸಕರ ನಿರ್ಲಕ್ಷ್ಯ ಆರೋಪ
author img

By

Published : May 27, 2021, 11:56 AM IST

ಚಿಕ್ಕಮಗಳೂರು: ಅಪಘಾತ ನಡೆದು ಕೋವಿಡ್ ವಾರಿಯರ್ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಅದೇ ಮಾರ್ಗವಾಗಿ ಹೋಗುತ್ತಿದ್ದ ತರೀಕೆರೆ ಶಾಸಕ ಕಾರಿನಿಂದ ಇಳಿಯದೆ ಅಮಾನವೀಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಶಾಸಕರ ಕಡೆಯಿಂದ ಸ್ಪಷ್ಟನೆ ದೊರೆತಿದೆ.

ಆರೋಗ್ಯಾಧಿಕಾರಿ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಕಾರಿನಿಂದ ಇಳಿಯದ ಶಾಸಕ: ಆರೋಪ

ಏನಿದು ಘಟನೆ ?

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಯೊಬ್ಬರ ಬೈಕ್​ಗೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್​ನಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿತ್ತು. ಅಪಘಾತದಿಂದ ಆರೋಗ್ಯಾಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಈ ವೇಳೆ ಅದೇ ದಾರಿಯಾಗಿ ತರೀಕೆರೆ ಶಾಸಕ ಸುರೇಶ್ ಕಾರಿನಲ್ಲಿ ಬಂದಿದ್ದರು. ಆರೋಗ್ಯಾಧಿಕಾರಿ ನೋವಿನಿಂದ ರಸ್ತೆಯಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರಿನಿಂದ ಇಳಿಯದೆ ಅಮಾನವೀಯವಾಗಿ ವರ್ತಿಸಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಅಪಘಾತ ನಡೆದ ಅರ್ಧ ಗಂಟೆ ಬಳಿಕ ಆ್ಯಂಬುಲೆನ್ಸ್ ತರಿಸಿ ಗಾಯಾಳುವನ್ನು ಶಿವಮೊಗ್ಗದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Covid warrior accident
ಮೃತ ಆರೋಗ್ಯಾಧಿಕಾರಿ

ಶಾಸಕರ ಸ್ಪಷ್ಟನೆ ಏನು?

ಘಟನೆಗೆ ಸಂಬಂಧಪಟ್ಟಂತೆ ಶಾಸಕರ ವಿರುದ್ಧದ ಆರೋಪಕ್ಕೆ ಅವರ ಆಪ್ತ ಸಹಾಯಕ ( ಪಿಎ) ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ಘಟನೆ ನಡೆದಾಗ ಶಾಸಕರು ಕಾರಿನಲ್ಲೇ ಇದ್ದರು. ಅವರು ಕೆಲ ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿದ್ದರು. ಅದಾದ ಬಳಿಕ ಶಾಸಕರು ಕಣ್ಣು ನೋವಿನಿಂದ ಬಳಲುತ್ತಿದ್ದರು. ಹಾಗಾಗಿ, ಐ ಡ್ರಾಪ್​ ಹಾಕಿಕೊಂಡಿದ್ದರು. ಈ ಕಾರಣದಿಂದ ಅಪಘಾತ ನಡೆದಾಗ ಕಾರಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಗಾಯಾಳುಗಳಿಗೆ ಶಾಸಕರ ಗನ್​ ಮ್ಯಾನ್ ಮತ್ತು ಕಾರಿನ ಚಾಲಕ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಓದಿ : ದಲಿತ ಯುವಕನಿಗೆ‌ ಪಿಎಸ್​ಐ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಮಹಿಳೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.