ಚಿಕ್ಕಮಗಳೂರು: ಮುಂಬೈನಿಂದ ಮಹಿಳೆ ಬಂದಿರುವ ಶಂಕೆ ಹಿನ್ನೆಲೆ, ಕಡೂರು ತಾಲೂಕಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಮಹಿಳೆ ಹಲವು ರಸ್ತೆಗಳಲ್ಲಿ ಓಡಾಡಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೈನ ಮಂದಿರ, ಐಬಿ ರಸ್ತೆ ಸೀಲ್ಡೌನ್ ಮಾಡಲಾಗಿದೆ.
ಮಹಿಳೆಯನ್ನು ಕರೆತಂದು ಅಪರಿಚಿತರು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ. ಮಹಿಳೆ ನಿರಂತರವಾಗಿ ಕೆಮ್ಮುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಮಹಿಳೆಯ ಗಂಟಲು ದ್ರವ, ರಕ್ತದ ಮಾದರಿ ಲ್ಯಾಬ್ಗೆ ರವಾನೆ ಮಾಡಲಾಗಿದ್ದು, ಮಧುವನ ಲೇಔಟ್ನ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ.