ETV Bharat / state

ವಾಮಾಚಾರದ ಉದ್ದೇಶಕ್ಕಾಗಿ 'ಗೂಬೆ' ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿ ಮಾರಟಕ್ಕೆ ಯತ್ನ! - ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ

ವಾಮಾಚಾರದ ಉದ್ದೇಶಕ್ಕಾಗಿ ಎರಡು ಕಾಡು ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.

ವಾಮಾಚಾರದ ಉದ್ದೇಶಕ್ಕಾಗಿ 'ಗೂಬೆ'ಗಳಿಗೆ ಶಸ್ತ್ರಚಿಕಿತ್ಸೆ..!
author img

By

Published : Sep 30, 2019, 6:25 PM IST

ಚಿಕ್ಕಮಗಳೂರು: ವಾಮಾಚಾರದ ಉದ್ದೇಶಕ್ಕಾಗಿ ಎರಡು ಕಾಡು ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇಲೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

owl
ವಾಮಾಚಾರದ ಉದ್ದೇಶಕ್ಕಾಗಿ 'ಗೂಬೆ'ಗಳಿಗೆ ಶಸ್ತ್ರಚಿಕಿತ್ಸೆ..!

ವಾಮಾಚಾರದ ಪೂಜೆಗೆ ಗೂಬೆಗಳು ಉತ್ತಮ ಎಂದು ರಾತ್ರಿಯ ಪೂಜೆಗೆಂದು ಗೂಬೆಯನ್ನು ಬೇಲೂರಿನಿಂದ ಚಿಕ್ಕಮಗಳೂರು ನಗರಕ್ಕೆ ತರುವ ವೇಳೆ ನಗರದ ಹೊರವಲಯದ ಹಿರೇಮಗಳೂರು ಬಳಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೇಲೂರಿನ ಚಂದನ್, ವಿಕಾಸ್ ಆಹಮ್ಮದ್, ವಸಂತ್ ಕುಮಾರ್, ಸಾಧಿಕ್ ಪಾಷ ಬಂಧಿತ ಆರೋಪಿಗಳು. ಇನ್ನು ಬಂಧಿತರಿಂದ ಒಂದು ಕಾರು, ನಾಲ್ಕು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಇದೇ ಮಾದರಿಯಲ್ಲಿ ಮಾಗಡಿ ಕೈಮರದಲ್ಲಿಯೂ ಅರಣ್ಯ ಇಲಾಖೆ ದಾಳಿ ಮಾಡಿ ಮತ್ತೊಂದು ಗೂಬೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭ ಸೋನಿ ಕುಮಾರ್, ಅಣ್ಣಪ್ಪ, ವಿನೋದ ಎಂಬ ಮಹಿಳೆಯನ್ನು ಬಂಧಿಸಿದ್ದು, ಪ್ರತ್ಯೇಕವಾಗಿ ಎರಡೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಗೂಬೆಗಳನ್ನು ಸುಮಾರು 30 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಚ್ಚರಿ ಅಂದರೆ ಐದು ಕಾಲಿನ ಗೊಬೆ ತುಂಬಾ ವಿಶೇಷ ಎಂಬ ನಂಬಿಕೆಯಿಂದ ಗೂಬೆಯ ಇನ್ನೊಂದು ಬೆರಳನ್ನು ಜೋಡಿಸಿ ಶಸ್ತ್ರ ಚಿಕಿತ್ಸೆ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Intro:Kn_Ckm_01_Gube kallaru_av_7202347Body:ಚಿಕ್ಕಮಗಳೂರು :-

ವಾಮಾಚಾರದ ಬಳಕೆಗಾಗಿ ಎರಡೂ ಕಾಡು ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿಯನ್ನು ಪಡೆದು ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಆರೋಪಿಗಳ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಮಾಚಾರದ ಪೂಜೆಗೆ ಗೂಬೆಗಳು ಪ್ರಶಸ್ತ ಎಂದೂ ರಾತ್ರಿಯ ಪೂಜೆಗೆ ಗೂಬೆಯನ್ನು ಬೇಲೂರಿನಿಂದಾ ಚಿಕ್ಕಮಗಳೂರು ನಗರಕ್ಕೆ ಬೃಹತ್ ಗಾತ್ರದ ಕಾಡು ಗೂಬೆಯನ್ನು ತರುವ ವೇಳೆಯಲ್ಲಿ ಈ ದಾಳಿ ಮಾಡಲಾಗಿದ್ದು ನಗರದ ಹೊರವಲಯದ ಹಿರೇಮಗಳೂರು ಬಳಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಬೇಲೂರಿನ ಚಂದನ್, ವಿಕಾಸ್ ಆಹಮ್ಮದ್, ವಸಂತ್ ಕುಮಾರ್, ಸಾಧಿಕ್ ಪಾಷ್ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಒಂದು ಕಾರು ನಾಲ್ಕು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ, ಇದೇ ಮಾದರಿಯಲ್ಲಿ ಮಾಗಡಿ ಕೈಮರದಲ್ಲಿಯೂ ಅರಣ್ಯ ಇಲಾಖೆ ದಾಳಿ ಮಾಡಿ ಮತ್ತೋಂದು ಗೂಬೆಯನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಸೋನಿ ಕುಮಾರ್, ಅಣ್ಣಪ್ಪ,ವಿನೋದ್ ಎಂಬ ಮಹಿಳೆಯನ್ನು ಬಂಧಿಸಿದ್ದು ಪ್ರತ್ಯೆಕ ಎರಡೂ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಗೂಬೆಗಳನ್ನು ಸುಮಾರು 30 ಲಕ್ಷ ರೂಪಾಯಿಗೆ ಈ ಗೂಬೆ ಮಾರಾಟ ಮಾಡಲು ಯತ್ನ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವಿಶೇಷ ಅಂದರೇ ಐದು ಕಾಲಿನ ಗೊಬೆ ತುಂಬಾ ವಿಶೇಷ ಎಂಬ ನಂಬಿಕೆಯಿಂದಾ ಗೂಬೆಗೆ ಇನ್ನೋಂದು ಬೆರಳನ್ನು ಜೋಡಿಸಿ ಶಸ್ತ್ರ ಚಿಕಿತ್ಸೆ ಮಾಡಿರೋದು ಈ ಘಟನೆಯಿಂದಾ ಬೆಳಕಿಗೆ ಬಂದಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.