ETV Bharat / state

ಗೋಹತ್ಯೆ ನಿಷೇಧದ ಬಳಿಕ ಮೊದಲ ಪ್ರಕರಣ ದಾಖಲು: ಜಾನುವಾರು ತುಂಬಿದ್ದ 2 ಕ್ಯಾಂಟರ್​ ವಶ - ಗೋ ಕಳ್ಳ ಸಾಗಾಣಿಕೆ

ಶೃಂಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ಕ್ಯಾಂಟರ್​​​ಗಳನ್ನು ವಶಕ್ಕೆ ತೆಗೆದುಕೊಂಡು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಜಾರಿಯಾಗಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ - 2020 ರಡಿಯಲ್ಲಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

states-first-case-record-after-the-cow-slaughter-act-passed
ಗೋಹತ್ಯೆ ನಿಷೇಧದ ಬಳಿಕ ರಾಜ್ಯದ ಮೊದಲ ಪ್ರಕರಣ ದಾಖಲು:
author img

By

Published : Jan 9, 2021, 4:00 PM IST

Updated : Jan 9, 2021, 4:19 PM IST

ಚಿಕ್ಕಮಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ದಿನ 2 ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಾರ್ಗವಾಗಿ ನಿನ್ನೆ ಬೆಳಗಿನ ಜಾವ 2 ಕ್ಯಾಂಟರ್​​​ಗಳಲ್ಲಿ ಹತ್ತಾರು ಜಾನುವಾರುಗಳನ್ನು ಸಾಗಣೆ ಮಾಡುವ ವೇಳೆ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಡೆದು ಜಾನುವಾರುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಜಾನುವಾರು ತುಂಬಿದ್ದ 2 ಕ್ಯಾಂಟರ್​ ವಶ

2 ಕ್ಯಾಂಟರ್​​​ಗಳ ಪೈಕಿ ಒಂದು ಕ್ಯಾಂಟರ್​​​ನ ಚಾಲಕ ಪರಾರಿಯಾಗಿದ್ದು, ಇನ್ನೋರ್ವ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ರಾಣೆಬೆನ್ನೂರು ಸುತ್ತಮುತ್ತ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು 2 ಕ್ಯಾಂಟರ್​​​​ನಲ್ಲಿ ತುಂಬಿಸಿಕೊಂಡು ಶೃಂಗೇರಿಯ ತನಿಕೋಡು ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗಿಸುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಯುವಕರು ಶೃಂಗೇರಿಯ ತನಿಕೋಡು ಚೆಕ್​​ಪೋಸ್ಟ್ ಬಳಿ ಕಾದು ಕುಳಿತು ಕ್ಯಾಂಟರ್​​ಗಳನ್ನು ತಡೆದು ಚಾಲಕನ್ನು ಹಿಡಿದ್ದಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ಕ್ಯಾಂಟರ್​​​ಗಳನ್ನು ವಶಕ್ಕೆ ತೆಗೆದುಕೊಂಡು ಚಾಲಕನನ್ನು ವಶಕ್ಕೆ ಪಡೆದು, ರಾಜ್ಯದಲ್ಲಿ ಜಾರಿಯಾಗಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ - 2020 ರಡಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್

Last Updated : Jan 9, 2021, 4:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.