ಚಿಕ್ಕಮಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀರಾಮ ಜಪ ಹಾಗೂ ಭಜನೆ ಮಾಡಿ, ದೇವಸ್ಥಾನದ ಆವರಣದಲ್ಲಿ ಜೈಕಾರ ಕೂಗಿದರು. ಇದೇ ವೇಳೆ 1990 ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ಸೋಮೇಶ್ ಹಾಗೂ ರಾಮಸ್ವಾಮಿಯನ್ನು ಸನ್ಮಾನಿಸಲಾಯಿತು.
ಈ ವೇಳೆ ಇಬ್ಬರು ಕರ ಸೇವಕರು ಮಾತನಾಡಿ, ಅಯೋಧ್ಯೆ ಹೋರಾಟದ ನೆನಪುಗಳನ್ನು ಮೆಲುಕು ಹಾಕಿದರು. ಅಯೋಧ್ಯೆ ಭೂಮಿ ಪೂಜೆ ಹಿನ್ನೆಲೆ ಬಜರಂಗದಳದ ರಾಷ್ಟ್ರೀಯ ಮುಖಂಡ ತುಡುಕೂರು ಮಂಜು ತನ್ನ ಕೈ ಮೇಲೆ ರಾಮ ಮಂದಿರದ ಟ್ಯಾಟೂ ಹಾಕಿಸಿಕೊಂಡರು.