ಚಿಕ್ಕಮಗಳೂರು/ಬೆಂಗಳೂರು: ಚಂದ್ರ ಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವರಿಗೆ ಶುದ್ಧೋದಕ ನೀರಿನ ಅಭಿಷೇಕ ಮಾಡಲಾಗಿದೆ.
ಗ್ರಹಣ ಮುಗಿಯುತ್ತಿದಂತೆ ದೇವಸ್ಥಾನದ ಅರ್ಚಕರು ಜಗನ್ಮಾತೆ ಅನ್ನಪೂರ್ಣೇಶ್ವರಿಗೆ ಅಭಿಷೇಕ ಮಾಡಿ ನಂತರ ಎಂದಿನಂತೆ ದೇವರಿಗೆ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಬೆಳಿಗ್ಗೆ 9 ಗಂಟೆಗೆ ದೇವರಿಗೆ ಮಹಾ ಮಂಗಳಾರತಿ ಮಾಡಲಾಗಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.
ಬೆಂಗಳೂರಿನಲ್ಲಿ ಚಂದ್ರಗಹಣ ಮುಗಿದ ಹಿನ್ನೆಲೆಯಲ್ಲಿ ಇಂದು ದೇವಾಲಯಗಳಲ್ಲಿ ವಿಶೇಷ ಪೋಜೆ ಹೋಮ ಹವನ ಯಜ್ಞ ಯಾಗಗಳು ನಡೆದವು. ಗ್ರಹಣ ಬಿಟ್ಟ ನಂತರ ದೇವಾಲಯಗಳನ್ನು ಸ್ವಚ್ಚಗೊಳಿಸಿ, ಪ್ರಮುಖ ದೇವಾಲಯಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದವು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.