ಚಿಕ್ಕಮಗಳೂರು: ಕೊರೊನಾ ಮಹಾಮಾರಿಯಂತೂ ಬಡವರ ನಿದ್ದೆಗೆಡಿಸಿದೆ. ಅದರಲ್ಲಿಯೂ ಕಾಫಿ ನಾಡಿನ ಮಲೆನಾಡಿನಲ್ಲಿರೋ ನಕ್ಸಲ್ ಪೀಡಿತ ಪ್ರದೇಶ ಬಡ ಕುಟುಂಬಗಳ ಸಂಕಷ್ಟವಂತೂ ಹೇಳತೀರದು.
ನಗರಗಳಿಗೆ ಬಂದು ಸರ್ಕಾರ ನೀಡಿದ ಸೀಮಿತ ಅವಧಿಯೊಳಗೆ ಏನನ್ನೂ ಕೊಳ್ಳಲಾಗದೇ ಅಸಹಾಯಕರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಕಾನನದ ದಾರಿಯಲ್ಲಿ ಹೋಗಿ ಆ ಜನರಿಗೆ ಆಹಾರ ಕಿಟ್ ವಿತರಿಸುವ ಮಾನವೀಯ ಕಾರ್ಯಕ್ಕೆ ಮುಂದಾಗಿದೆ ಸ್ಪಂದನ ಟ್ರಸ್ಟ್.
ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ದಟ್ಟ ಕಾನನದ ನಡುವೆ, ರಸ್ತೆಯೂ ಇಲ್ಲದೇ, ಸಾರಿಗೆ ವ್ಯವಸ್ಥೆಯೂ ಇಲ್ಲದಿರೋ ಹಲವು ಗ್ರಾಮಗಳಿವೆ. ಅಂತಹ ಗ್ರಾಮದಲ್ಲಿರೋ ಬಡ ಕುಟುಂಬಗಳನ್ನು ಗುರುತಿಸೋ ಕೆಲ್ಸಕ್ಕೆ ಮುಂದಾಗಿದೆ ಕೊಪ್ಪ ತಾಲೂಕಿನ ಜಯಪುರದ ಸ್ಪಂದನ ಟ್ರಸ್ಟ್. ಕೊರೊನಾ ಲಾಕ್ಡೌನ್ ನಲ್ಲಿ ನಗರಕ್ಕೆ ಬರೋಕೆ ಆಗದೇ ಹಸಿವಿನ ಸಂಕಟದಲ್ಲಿರೋ ಗುಡ್ಡಗಾಡಿನ ಸ್ಥಳಗಳಿಗೆ ಹೋಗಿ ಅಲ್ಲಿರೋ ಬಡಕುಟುಂಬಗಳಿಗೆ ಕಿಟ್ ವಿತರಿಸಿ ಅವ್ರಿಗೆ ಸಹಾಯಾಸ್ತ ಚಾಚಿದ್ದಾರೆ ಈ ಟ್ರಸ್ಟ್ನಲ್ಲಿರುವ ಸಹೃದಯಿಗಳು. ಸ್ಪಂದನ ಟ್ರಸ್ಟ್ ಕಾರ್ಯಕ್ಕೆ ಆರ್ಎಸ್ಎಸ್ ನ ಹಲವರು ಸಹಾಯ ಮಾಡ್ತಾ ಇದ್ದಾರೆ.
ಇನ್ನೂ ಮೆಣಸಿನಹಾಡ್ಯ ಸೇರಿದಂತೆ ಇಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕಕ್ಕೆ ಸರಿಯಾದ ರಸ್ತೆಯೇ ಇಲ್ಲದಂತಾಗಿದೆ. ಅದ್ರಲ್ಲಿಯೂ ಲಾಕ್ಡೌನ್ ಅದ ಮೇಲಂತೂ ಆಟೋ, ಖಾಸಗಿ ವಾಹನಗಳೂ ಸಹ ಹೋಗೋದೆ ಇಲ್ಲ. ನಡ್ಕೊಂಡು ಕಿ.ಮೀ. ಗಟ್ಟಲೇ ಬಂದು ಅಗತ್ಯ ವಸ್ತುಗಳ ಖರೀದಿಯಂತೂ ಅಸಾಧ್ಯವೇ ಎನಿಸಿರುವಾಗ ತಾವಿರುವಲ್ಲಿಗೆ ಬಂದು ಸಹಾಯ ಮಾಡ್ತಿರುವ ಸ್ಪಂದನ ಟ್ರಸ್ಟ್ ನ ಕೆಲ್ಸಕ್ಕೆ ಅಲ್ಲಿನ ಜನ್ರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಕೊರೊನಾದ ವಿರುದ್ಧ ಸೆಣಸಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡಿ ಕೃತಜ್ಞತೆ ಸಲ್ಲಿಸಲಾಗಿದೆ.
ಕುಗ್ರಾಮಗಳಲ್ಲಿರೋರು ಸಂಷ್ಟದಲ್ಲಿದ್ದರು ಯಾರಿಗೂ ಹೇಳಲಾಗದೇ ತೊಂದರೆ ಸಿಲುಕಿರೋರನ್ನು ಹುಡುಕಿ ಅವ್ರಿಗೆ ಹಸಿವಿನ್ನ ನೀಗಿಸೋಕೆ ಮುಂದಾದ ಸ್ಪಂದನ ಟ್ರಸ್ಟ್ ಜನರು, ಮಲೆನಾಡಿನ ಕೊರೊನಾ ಹೀರೋಗಳಾಗಿದ್ದಾರೆ ಅಂತಿದ್ದಾರೆ ಟ್ರಸ್ಟ್ನಿಂದ ಸಹಾಯ ಪಡೆದವರು.