ಚಿಕ್ಕಮಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ತರುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಒಡಿ ತನಿಖೆಗೆ ನೀಡುವುದರಿಂದ ಏನು ಪ್ರಯೋಜನವಿಲ್ಲ. ಎಷ್ಟೋ ಬಾರಿ ನ್ಯಾಯಾಂಗ ತನಿಖೆಗಳೇ ಬಿದ್ದು ಹೋಗಿವೆ. ಮೃತರ ಕುಟುಂಬಗಳಿಗೆ ಹತ್ತು ಲಕ್ಷ ರೂ. ಹಣ ನೀಡಿದ್ದಾರೆ. ಅದನ್ನು ನಾನು ಪರಿಹಾರ ಎಂದು ಹೇಳಲಾರೆ. ಆ ಸಂದರ್ಭದಲ್ಲಿನ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದರು.
ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಾಗ ವೈಯಕ್ತಕವಾಗಿ ಹಾಗೂ ಸಾರ್ವಜನಿಕವಾಗಿ ಜನರು ಒಪ್ಪದೇ ಇದ್ದಾಗ ಇಂತಹ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ. ಪ್ರಜಾಪ್ರಭುತ್ವ ವ್ಯವಸ್ಥಯೆಲ್ಲಿ ಅದಕ್ಕೆ ಅನುಮತಿ ಸಹ ಇದೆ. ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗೋಲಿಬಾರ್ ಸಂಬಂಧ ಸೂಕ್ತ ತನಿಖೆ ಅಗತ್ಯ ಎಂದರು.
ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಪ್ರಕರಣಗಳಲ್ಲಿ ಈ ರೀತಿಯಾಗಿ ಆಗಬಾರದಿತ್ತು. ಗೋಲಿಬಾರ್ಗೆ ಕಾರಣ ಯಾರು, ಅಲ್ಲಿ ಗೋಲಿಬಾರ್ ಮಾಡುವ ಪರಿಸ್ಥಿತಿ ನಿಜವಾಗಿಯೂ ನಿರ್ಮಾಣ ಆಗಿತ್ತಾ ಅಥವಾ ಬೇರೆ ಬೇರೆ ಕಾರಣದಿಂದ ಗೋಲಿಬಾರ್ ಆಯ್ತಾ ಎಂಬುದು ತಿಳಿಯಬೇಕು ಎಂದರು.