ETV Bharat / state

ಮಾಜಿ ಸಚಿವ ಡಿ.ಎನ್.ಜೀವರಾಜ್ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸುಳ್ಳು- ಕೋರ್ಟ್

author img

By ETV Bharat Karnataka Team

Published : Oct 10, 2023, 9:34 PM IST

ಮಾಜಿ ಸಚಿವ ಡಿ.ಎನ್.ಜೀವರಾಜ್ ಪ್ರತಿ ದೂರು ಸಲ್ಲಿಸಿದ್ದರಿಂದ ಆರೋಪಿಗಳಿಗೆ ಎನ್​.ಆರ್​ ಪುರ ಕೋರ್ಟ್ ಶಿಕ್ಷೆ ಹಾಗು ದಂಡ ವಿಧಿಸಿದೆ.

ಮಾಜಿ ಸಚಿವ ಡಿ.ಎನ್ ಜೀವರಾಜ್
ಮಾಜಿ ಸಚಿವ ಡಿ.ಎನ್ ಜೀವರಾಜ್
ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿಕೆ

ಚಿಕ್ಕಮಗಳೂರು : ಶೃಂಗೇರಿ ಕ್ಷೇತ್ರದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸುಳ್ಳು ಎಂದು ಎನ್.ಆರ್.ಪುರ ಜೆಎಂಎಫ್​ಸಿ ನ್ಯಾಯಾಲಯ ತೀರ್ಪು ನೀಡಿದೆ. ಕೋರ್ಟ್ ತೀರ್ಪಿನ ಬಳಿಕ ಜೀವರಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, ಸುಳ್ಳು ಆರೋಪವೇ ನನ್ನ ಎರಡು ಸೋಲಿಗೆ ಕಾರಣವಾಯ್ತು. ಈ ಪ್ರಕರಣದಲ್ಲಿ ಆರೋಪ ಸುಳ್ಳು ಎಂದು ಕೋರ್ಟ್ ತೀರ್ಪು ನೀಡಿದೆ. ಯುವತಿ ಅರಣ್ಯ ಹಾಗೂ ಮನು ಎಂಬವರಿಗೆ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ ಎಂದರು.

ಮೊದಲು 5 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ ಅರಣ್ಯ ಹಾಗೂ ಮನು ಎಂಬವರು ಬಳಿಕ 2 ಕೋಟಿಯಿಂದ ಕೊನೆಗೆ 22 ಲಕ್ಷ ರೂ.ಗೆ ಬಂದಿದ್ದರು. ಈ ಎಲ್ಲಾ ದಾಖಲೆಗಳನ್ನಿಟ್ಟು 2013 ಆಗಸ್ಟ್​ 20 ರಂದು ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆ. ಇದೇ ರೀತಿ ಆಶೀಶ್ ಕುಮಾರ್ ಹಾಗೂ ನಾಗರಾಜ್ ಎಂಬವರಿಗೂ ಮಾಡಿದ್ದರು. ಅವರು ಕೂಡಾ 2013 ಅಗಸ್ಟ್​ 21 ರಂದು ಎನ್​.ಆರ್.ಪುರದಲ್ಲಿ ಕೇಸ್​ ದಾಖಲು ಮಾಡಿದ್ದರು. ಈ ಎಲ್ಲಾ ಕೇಸ್​ಗಳಿಂದ ತಪ್ಪಿಸಿಕೊಳ್ಳಲು 2013 ನವೆಂಬರ್​ 8 ರಂದು ನನ್ನ ಮೇಲೆ ಅತ್ಯಂತ ಕೆಟ್ಟದಾದ ಕೇಸ್​ ದಾಖಲು ಮಾಡಿದ್ದರು.

ಅವತ್ತಿನ ಸರ್ಕಾರ ಸಿಎಂ ಸಿದ್ದರಾಮಯ್ಯ ಮತ್ತು ಅಂದಿನ ಗೃಹಮಂತ್ರಿ ಜಾರ್ಜ್ ಅವರು ನಾನು ಮತ್ತು ಅರಣ್ಯ, ಮನು ದಾಖಲು ಮಾಡಿದ್ದ ಎರಡು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದರು. ಸಿಐಡಿಯಲ್ಲಿ ಸಮಗ್ರ ತನಿಖೆ ನಡೆದು ಅವರು ನವೆಂಬರ್​ನಲ್ಲಿ ಕೊಟ್ಟಿದ್ದ ಕೇಸ್​ 2014 ಅಗಸ್ಟ್​ ಸೆಪ್ಟೆಂಬರ್​ ಹೊತ್ತಿಗೆ ಬಿ ರಿಪೋರ್ಟ್​ ಮಾಡಿ ಎನ್​.ಆರ್​.ಪುರ ಕೋರ್ಟ್​ಗೆ ಸಲ್ಲಿಸಲಾಯಿತು. ಬಳಿಕ ಕೋರ್ಟ್​ ಸರಿಯಾದ ದಾಖಲೆ ಇಲ್ಲ ಎಂದು ಕೇಸ್​ ವಜಾಗೊಳಿಸಿತ್ತು.

2015ರಲ್ಲಿ ಆಶೀಶ್ ಕುಮಾರ್ ಹಾಗೂ ನಾಗರಾಜ್ ಅವರ ಕೇಸ್​ ಕೂಡ ಸಿಐಡಿಯಿಂದ ಚಾರ್ಜ್‌ಶೀಟ್​ಆಗಿ ಎನ್​.ಆರ್.ಪುರ ಕೋರ್ಟ್​ಗೆ ಬಂತು. ​ಆದರೆ, ನಾನು ಕೊಟ್ಟ ಕೇಸ್​ ಚಾರ್ಜ್‌ಶೀಟ್ ಆಗಿ ಬರಲಿಲ್ಲ. ಏಕೆ ಅಂತಾ ಗೊತ್ತಿಲ್ಲ. 2018ರ ಚುನಾವಣೆಯಲ್ಲಿ ಸೋತ ಮೇಲೆ ಚಾರ್ಜ್‌ಶೀಟ್‌ ಆಗಿ ಬಂತು. ಅಲ್ಲಿಂದ ಇಲ್ಲಿವರೆಗೆ ಸುರ್ದೀಘವಾದ ವಾದಗಳು ನಡೆದು, ದಾಖಲೆಗಳ ಪರಿಶೀಲನೆ ನಡೆದ ಮೇಲೆ ಅಕ್ಟೋಬರ್​ 5 ರಂದು ಮೂರು ಕೇಸ್​ಗಳ ತೀರ್ಪು ಬಂದಿದೆ. ಅರಣ್ಯಗೆ 2 ವರ್ಷ ಜೈಲು 5,000 ದಂಡ ಹಾಗೂ ಮನು ಎಂಬವರಿಗೆ 19 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ನಟರು, ಪ್ರೊಡ್ಯೂಸರ್, ಡೈರಕ್ಟರ್​ಗೆ ಭಗವಂತನ ಕೋರ್ಟಿನಲ್ಲಿ ಶಿಕ್ಷೆಯಾಗಲಿದೆ ಎಂದು ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿಗೆ ಬಂದು ನಾಲ್ಕು ಬಾರಿ ಸೋತೇ ಎಂದು ಹೇಳುತ್ತಾರೆ. ನಾನು ಬಿಜೆಪಿಯಲ್ಲಿ ಇದ್ದೇ ನಾಲ್ಕು ಬಾರಿ ಸೋತಿದ್ದೇನೆ ಎಂದು ಹೇಳಲು ಆಗುತ್ತಾ? ಸೋತಿದ್ದು ಮಾತ್ರ ಹೇಳಬಾರದು, 3 ಬಾರಿ ಗೆಲ್ಲಿಸಿ, ಮಂತ್ರಿ ಮಾಡಿರುವುದನ್ನೂ ಹೇಳಬೇಕು. ಸೋಮಣ್ಣ ಅವರಿಗೆ 2 ಬಾರಿ ಸೋತಾಗಲೂ ಮಂತ್ರಿ ಮಾಡಲಾಗಿದೆ. ಆಗ ನಾನು ಎಂಎಲ್​ಎ, ಸೋಮಣ್ಣರಿಗೆ ಮತ ಹಾಕಿದ್ದೇನೆ. ಹೋದ ಎಲ್ಲಾ ಪಕ್ಷದಲ್ಲೂ ಅಧಿಕಾರ ಮಾಡ್ತೇವೆ ಅನ್ನೋ ಮನಸ್ಥಿತಿ ಸರಿಯಲ್ಲ. ಇರೋ ಪಕ್ಷಕ್ಕೆ ನಿಷ್ಠೆ ತೋರಬೇಕು. ಪಕ್ಷಕ್ಕೆ ಸೋಲಾದಾಗ ಜೊತೆಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ಇಸ್ರೇಲ್-ಹಮಾಸ್ ನಡುವಿನ ಯುದ್ಧದ ವಿಚಾರದ ಬಗ್ಗೆ ಮಾತನಾಡಿ, ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದ್ದರು. ನೀವು ದುರ್ಗಿಯ ಅವತಾರ ತಾಳಿ, ದೇಶ ಕಾಪಾಡಿ ಎಂದು ವಾಜಪೇಯಿ ಹೇಳಿದ್ದರು. ಇದು ವಿರೋಧ ಪಕ್ಷ ಮಾಡಬೇಕಾದ ಕೆಲಸ. ದೇಶ ಒಂದು ತೀರ್ಮಾನ ಮಾಡುತ್ತೆ, ಕಾಂಗ್ರೆಸ್ ಮತ್ತೊಂದು ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ರಾಜಕಾರಣದ ಮತ ಬ್ಯಾಂಕಿಗಾಗಿ ಪ್ಯಾಲಸ್ಟೀನ್ ಪರ ನಿಲ್ಲುತ್ತೇವೆ ಎನ್ನುತ್ತದೆ. ಒಳಗೇನು ಬೇಕಾದರೂ ಹೋರಾಡೋಣ, ದೇಶ-ಭದ್ರತೆಯ ವಿಚಾರ ಬಂದಾಗ ಕಾಂಗ್ರೆಸ್ ವಿಪಕ್ಷವಾಗಿ ನಿಲ್ಲಬಾರದು ಎಂದು ಚಿಕ್ಕಮಗಳೂರಿನಲ್ಲಿ ಜೀವರಾಜ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.​

ಇದನ್ನೂ ಓದಿ : 'ಮುಂದಿನ 6 ತಿಂಗಳು ಜನ‌ರಿಗೆ ಕತ್ತಲೆ ಭಾಗ್ಯ': ಮಾಜಿ ಸಚಿವ ಸುನೀಲ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.