ETV Bharat / state

ಡಿಕೆಶಿ ಮುಂದೊಂದು ದಿನ ಸಿಎಂ; ಮೋದಿ ಮತ್ತೊಮ್ಮೆ ಪ್ರಧಾನಿ: ರಾಜಗುರು ದ್ವಾರಕನಾಥ್ ಭವಿಷ್ಯ - undefined

ಡಿ.ಕೆ.ಶಿವಕುಮಾರ್ ಮುಂದೊಂದು ದಿನ ಸಿಎಂ ಆಗ್ತಾರೆ. ಅವರು ರಾಜ್ಯವನ್ನು ಆಳುವ ದಿನ ಬರುತ್ತದೆ. ಅಕ್ಕಿ ಹಾಕಿದ ತಕ್ಷಣ ಅನ್ನ ಆಗಲ್ಲ, ಇದೂ ಹಾಗೇನೇ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದರು. ಇದೇ ವೇಳೆ ದೇಶದ ಮುಂದಿನ ಪ್ರಧಾನಿಯ ಬಗೆಗೂ ಅವರು ಭವಿಷ್ಯ ನುಡಿದರು.

Rajguru Dwarkanath spoke to the media.
ರಾಜಗುರು ದ್ವಾರಕನಾಥ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Dec 26, 2023, 10:25 PM IST

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರಿತಂತೆ ರಾಜಗುರು ದ್ವಾರಕನಾಥ್ ಕುತೂಹಲದ ಭವಿಷ್ಯ ನುಡಿದರು. ಡಿ.ಕೆ.ಶಿವಕುಮಾರ್ ಮುದೊಂದು ದಿನ ಸಿಎಂ ಆಗ್ತಾರೆ. ಅವರಿ​ಗೆ ಉತ್ತಮ ಭವಿಷ್ಯ ಇದೆ. ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ, ಕೂತಿರುವವರೆಗೂ ತೊಂದರೆ ಕೊಡಬೇಡಿ. ನನ್ನ ಶಿಷ್ಯ ಶಿವಕುಮಾರ್ ಸಿಎಂ ಆಗ್ತಾನಾ ಅನ್ನೋ ಸಂಶಯ ಎಲ್ಲರಲ್ಲೂ ಇದೆ. ಸಿಎಂ ಆಗಬೇಕಾದ್ರೆ ಸುತ್ತಮುತ್ತ ಶುದ್ಧ ಮನಸ್ಸುಗಳನ್ನು ಇಟ್ಟುಕೊಂಡು, ಶಾಸಕರ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಹೆಸರು ಗೊತ್ತಾಗಬೇಕಾದರೆ ಎಲ್ಲೆಡೆ ಸುತ್ತಾಡಬೇಕು. ಕಾರ್ಯಕರ್ತರೇ ‌ಮುಖ್ಯ. ಕಾರ್ಯಕರ್ತರ ವಿಶ್ವಾಸ ಗಳಿಸಬೇಕು. ಈಗ ಸಿದ್ದರಾಮಯ್ಯ ಬದಲಾವಣೆ ಆಗ್ತಾರೆ ಅನ್ನೋದು ಸಲ್ಲದ ಮಾತು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ. ಆರು ತಿಂಗಳಾಗಿದೆ, ಅವರನ್ನು ಸುಮ್ಮನೆ ಬಿಡಬೇಕು ಎಂದರು.

ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೀಳಲ್ಲ: ದತ್ತ ಪೀಠದ ದತ್ತಾತ್ರೇಯರ ಜಾಗದಲ್ಲಿ ಕುಳಿತು ಹೇಳುತ್ತೇನೆ. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಅವರಿಗೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಗುಣದಲ್ಲಿ ಬದಲಾವಣೆ ಮಾಡಿಕೊಂಡರೆ ಡಿಕೆಶಿ ಸಿಎಂ ಆಗುತ್ತಾರೆ. ಅವರು ರಾಜ್ಯವನ್ನು ಆಳುವ ದಿನ ಬರಲಿದೆ. ಅಕ್ಕಿ ಹಾಕಿದ ತಕ್ಷಣ ಅನ್ನ ಆಗಲ್ಲ, ಇದೂ ಹಾಗೇನೆ ಎಂದು ಹೇಳಿದರು.

ಮೋದಿ ಪ್ರಧಾನಿ ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ: ದೇಶಕ್ಕೆ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ. ಅವರು ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ. ಮೋದಿಯಲ್ಲಿ ಯಾರೂ ತಪ್ಪು ಕಂಡು ಹಿಡಿಯಲು ಆಗಿಲ್ಲ. ಇದು ನಮ್ಮ ಪ್ರಯತ್ನ ಅಲ್ಲ. ಅದೊಂದು ದೈವ ಶಕ್ತಿ. ಅವರಿಗೆ ಪುಣ್ಯ ಇದ್ಯೋ ಗೊತ್ತಿಲ್ಲ. ಅವರಿಗೆ ವಿರೋಧ ಅಲೆಯೇ ಇಲ್ಲ. 2028ಕ್ಕೆ ವಿರೋಧ ಪಕ್ಷ ಬಲಿಷ್ಠವಾಗುತ್ತದೆ ಎಂದು ಭವಿಷ್ಯ ನುಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.