ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಎಡೆಬಿಡದೇ ಸುರಿದು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದ ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ಇದೀಗ ಮತ್ತೆ ಮಳೆ ಆರಂಭವಾಗಿದ್ದು,ಜನ ಆತಂಕದಲ್ಲಿದ್ದಾರೆ.
ಕೆಲವು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯ ಕಾರಣ ಪ್ರವಾಹ ಉಂಟಾಗಿ ಮನೆ, ಗುಡ್ಡಗಳು ಕುಸಿತ ಕಂಡಿದ್ದವು. ನಿನ್ನೆಯಷ್ಟೇ ವರುಣ ದೇವ ಸ್ವಲ್ಪ ಬಿಡುವು ನೀಡಿದ್ದ. ಇನ್ನೇನು ಮಳೆ ನಿಲ್ತು ಅಂತ ಇಲ್ಲಿನ ಜನ ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲೇ ಇದೀಗ ವರುಣ ಮತ್ತೆ ತನ್ನ ವರಸೆ ಮುಂದುವರಿಸಿದ್ದು, ಜನರು ಮತ್ತೆ ಆತಂಕಗೊಂಡಿದ್ದಾರೆ.
ಮಳೆ ಕೊಂಚ ಬಿಡುವು ನೀಡಿದ್ದರಿಂದ ಮಣ್ಣು ತೆರವು ಕಾರ್ಯಕ್ಕೆ ಮುಂದಾಗಲಾಗಿತ್ತು. ಆದರೆ, ಇದೀಗ ಮತ್ತೆ ಮಳೆ ಆರಂಭವಾಗಿದ್ದು ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಇಲ್ಲಿನ ಜನ ಮಳೆ ನಿಲ್ಲಲಿ ಅಂತ ಜಪ ಮಾಡುವಂತಾಗಿದೆ.