ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಜನರನ್ನು ಕ್ವಾರಂಟೈನ್ ಮಾಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮೂಡಿಗೆರೆ ತಾಲೂಕಿನಲ್ಲಿ ಕಳೆದ ಮೂರು ದಿನದ ಹಿಂದೆ ಓರ್ವ ಸರ್ಕಾರಿ ವೈದ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೈದ್ಯನ ಬಳಿ ನೂರಾರೂ ರೋಗಿಗಳು ಚಿಕಿತ್ಸೆಯನ್ನು ಪಡೆದಿದ್ದಾರೆ. ಈಗ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್ ಮಾಡಲಾಗುತ್ತಿದೆ. ಈ ವೇಳೆ ಹಳ್ಳಿಗಳಲ್ಲಿ ಒಳ ಜಗಳ ನಡೆಯುತ್ತಿದ್ದು, ಬಡವರಿಗೊಂದು ರೂಲ್ಸ್, ಶ್ರೀಮಂತರಿಗೊಂದು ರೂಲ್ಸ್ ಎಂಬ ಆರೋಪ ಕೇಳಿ ಬಂದಿದೆ.
ಕೈಗೆ ಸೀಲ್ ಹಾಕಿಸಿಕೊಂಡ ಶ್ರೀಮಂತರಿಗೆ ಮನೆಯಲ್ಲಿ ಕ್ವಾರೈಂಟೈನ್, ಬಡವರಿಗೆ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಂಟೈನ್ ಎಂಬ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳ ಯಡವಟ್ಟಿಗೆ ಆಶಾ ಕಾರ್ಯಕರ್ತೆಯರೂ ಸುಸ್ತಾಗಿ ಹೋಗಿದ್ದು, ಕ್ಕ್ವಾರಂಟೈನ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎನ್ನಲಾಗಿದೆ.